Thursday, April 18, 2024

ರಾಜಕೀಯ ಕುತೂಹಲ ಕೆರಳಿಸಿದ ವೀರಕಂಭ ಗ್ರಾ.ಪಂ.ಅಧ್ಯಕ್ಷ ಪಟ್ಟ ಬಿಜೆಪಿ ಬೆಂಬಲಿಗನ ಪಾಲಿಗೆ!

ಬಂಟ್ವಾಳ: ಬಾರೀ ಕುತೂಹಲ ಮೂಡಿಸಿದ್ದ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿಗ ಪಾಲಿಗೆ ದಕ್ಕಿದೆ.

ಆ ಮೂಲಕ ಸಮಬಲವಾಗಿದ್ದ ವೀರಕಂಭ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಾಗೂ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಆಯ್ಕೆ ಯಾಗಿದ್ದಾರೆ.

ವೀರಕಂಭ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿತ್ತು.

ಸಮಬಲವಾಗಿದ್ಧ ವೀರಕಂಭ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿಗ ದಿನೇಶ್ ಹಾಗೂ ಕಾಂಗ್ರೇಸ್ ಬೆಂಬಲಿಗ ರಘು ಇಬ್ಬರು ಸ್ಪರ್ಧೆ ಮಾಡಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೀಲಾ ವೇಗಸ್ ಹಾಗೂ ಬಿಜೆಪಿ ಬೆಂಬಲಿತ ಜಯಂತಿ ಪೂಜಾರಿ ಸ್ಪರ್ದೇ ಮಾಡಿದ್ದರು.

ಕಾಂಗ್ರೆಸ್ ಬೆಂಬಲಿತೆ ಅಭ್ಯರ್ಥಿ ಯಗಿ ಶೀಲಾ ವೇಗಸ್ ಉಪಾಧಕ್ಷೆಯಾಗಿ ಆಯ್ಕೆ ಯಾಗಿದ್ದಾರೆ.

*ಅಡ್ಡಮತದಾನ*

ಸಮಬಲವಾಗಿದ್ದ ವೀರಕಂಭ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಅಡ್ಡಮತದಾನ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅಧ್ಯಕ್ಷ ರಾಗಿ ಆಯ್ಕೆ ಯಾಗುವಂತಾಗಿದೆ.

*ಬೆಳಿಗ್ಗೆ ಬಿಜೆಪಿ ಸಂಜೆ ಕಾಂಗ್ರೇಸ್*

ಸಮಬಲವಾಗಿದ್ದ ವೀರಕಂಭ. ಗ್ರಾ.ಪಂ.ನಲ್ಲಿ ಅಧಿಕಾರವನ್ನು ಪಡೆಯಲು ಎರಡು ರಾಜಕೀಯ ಪಕ್ಷಗಳ ಕಸರತ್ತು ಗಳು ತೆರೆಮರೆಯಲ್ಲಿ ನಡೆದಿತ್ತು.

ಹಾಗಾಗಿ ಗೆದ್ದ ಅಭ್ಯರ್ಥಿಗಳ ಕುದುರೆ ವ್ಯಾಪಾರ ವಹಿವಾಟು ಕೂಡ ನಡೆದಿತ್ತು.

ಬಿಜೆಪಿ ಅಧಿಕಾರಕ್ಕೆ ಬರುವ ಹಿನ್ನೆಲೆಯಲ್ಲಿ ವೀರಕಂಭ ಗ್ರಾಮಪಂಚಾಯತ್ ಕಾಂಗ್ರೇಸ್ ಬೆಂಬಲಿತೆ ಮಹಿಳಾ ಅಭ್ಯರ್ಥಿಯೋರ್ವರನ್ನು ಬಿಜೆಪಿಗೆ ಧ್ವಜ ನೀಡಿ ಶಾಸಕರ ಸಮ್ಮುಖದಲ್ಲಿ ಸೇರ್ಪಡೆ ಮಾಡಿತ್ತು.

ಆದರೆ ಸಂಜೆಯಾಗುತ್ತಿದ್ದಂತೆ ಮತ್ತೆ ಅ ಮಹಿಳಾ ಅಭ್ಯರ್ಥಿ ಕಾಂಗ್ರೇಸ್ ಧ್ವಜವನ್ನು ಹಿಡಿದು ಮಾಜಿ ಶಾಸಕರ ಸಮ್ಮುಖದಲ್ಲಿ ಸೇರ್ಪಡೆ ಮಾಡಲಾಗಿತ್ತು.

ಬಳಿಕ ಆ ಮಹಿಳಾ ಅಭ್ಯರ್ಥಿಯ ಮನೆಯ ಮುಂದೆ ಓರ್ವ ಪೋಲೀಸ್ ನೇಮಕ ಮಾಡಲಾಗಿತ್ತು.

ಇಂದು ಮತದಾನಕ್ಕೆ ಬರುವ ವೇಳೆಯೂ ಮಹಿಳಾ ಅಭ್ಯರ್ಥಿ ಯನ್ನು ಭದ್ರತೆ ಯಲ್ಲಿ ಕರೆದುಕೊಂಡು ಬರಲಾಗಿತ್ತು.

ಆದರೆ ಇಷ್ಟೆಲ್ಲಾ ನಾಟಕೀಯ ಬೆಳವಣಿಗೆಯ ಮಧ್ಯೆಯೂ ಅಡ್ಡಮತದಾನ ಮಾಡಿದ್ದಾರೆ.

More from the blog

ನರಿಕೊಂಬು: ನವಜೀವನ ವ್ಯಾಯಾಮ ಶಾಲೆ: 21ರಂದು ಹನುಮಾನ್ ಮಂದಿರ ಲೋಕಾರ್ಪಣೆ

ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲೆ ವತಿಯಿಂದ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿಮರ್ಾಣಗೊಂಡ ಶ್ರೀ ಹನುಮಾನ್ ಮಂದಿರ ಲೋಕಾರ್ಪಣೆ ಮತ್ತು ಶ್ರೀ ಆಂಜನೇಯ ಬಿಂಬ ಪುನರ್ ಪ್ರತಿಷ್ಠೆ...

ಹಿಂದೂ ಸಂಘಟನೆ ಮುಖಂಡನಿಗೆ ಚೂರಿ ಇರಿದ ಪ್ರಕರಣ : ಆರೋಪಿ ಅರೆಸ್ಟ್

ಬಂಟ್ವಾಳ: ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೋಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ. ಬಂಟ್ವಾಳ ನಿವಾಸಿ ರವಿ ಯಾನೆ ರವೀಂದ್ರ ಬಂಧಿತ ಆರೋಪಿಯಾಗಿದ್ದಾನೆ. ಎ.14 ರಂದು ಆದಿತ್ಯವಾರ...

ಬಂಟ್ವಾಳ: ಕರ್ಪೆ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವಂತೆ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಕಾರ್ಯಕ್ರಮದ ಮೂಲಕ ಬಂಟ್ವಾಳದ...

ವೈದ್ಯರ ಎಡವಟ್ಟು : ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಗೆ ಡಿಕ್ಕಿ

ಮಂಗಳೂರಿನ ಹೆಸರಾಂತ ಮನೋರೋಗ ತಜ್ಞರೊಬ್ಬರು ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಗೆ ಡಿಕ್ಕಿ ಹೊಡೆದು ಆವಾಂತರ ಸೃಷ್ಟಿಸಿದ ಘಟನೆ ನಗರ ಹೊರ ವಲಯದ ಪರಂಗಿಪೇಟೆ ಬಳಿಯ ಅರ್ಕುಳ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಕುಡಿದ...