ವಾಮದಪದವು: ಇಲ್ಲಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತಿಗೆ ಬುಧವಾರ ನಡೆದ ಅಧ್ಯಕ್ಷ/ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಭಾರತಿರಾಜೇಂದ್ರ ಪೂಜಾರಿ ಮತ್ತು ಉಪಾಧ್ಯಕ್ಷರಾಗಿ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು ಆಯ್ಕೆಯಾಗಿದ್ದಾರೆ.
ಇಪ್ಪತ್ತು ಸದಸ್ಯ ಬಲವನ್ನು ಹೊಂದಿರುವ ಚೆನ್ನೈತ್ತೋಡಿ ಗ್ರಾಮ ಪಂಚಾಯತಿಯಲ್ಲಿ 13 ಮಂದಿ ಕಾಂಗ್ರೇಸ್ ಬೆಂಬಲಿತರು ಹಾಗೂ ಏಳು ಮಂದಿ ಬಿಜೆಪಿ ಬೆಂಬಲಿತರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ನಿಂದ ಭಾರತಿರಾಜೇಂದ್ರ ಮತ್ತು ಬಿಜೆಪಿಯಿಂದ ಕುಸುಮಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ನಿಂದ ಉದಯ ಕುಮಾರ್ ಶೆಟ್ಟಿ ಮತ್ತು ಬಿಜೆಪಿಯಿಂದ ರವಿರಾಮ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು.
ಮತದಾನದಲ್ಲಿ ಕಾಂಗ್ರೆಸ್ ಬೆಂಬಲಿತರು ತಲಾ 13 ಮತ್ತು ಬಿಜೆಪಿ ಬೆಂಬಲಿತರು ತಲಾ 7 ಮತಗಳನ್ನು ಪಡೆದರು.
ಪಂಚಾಯತು ನೋಡಲ್ ಅಧಿಕಾರಿ ಪ್ರದೀಪ್ ಡಿಸೋಜ, ಪಂಚಾಯತು ಅಭಿವೃದ್ಧಿ ಅಧಿಕಾರಿ ಯಮುನಪ್ಪ ಕೊರವರ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿದರು.
ತಾಲೂಕು ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪಕ್ಷದ ನಾಯಕರಾದ ಸುದರ್ಶನ್ ಜೈನ್, ಅಮ್ಮು ರೈ ಹರ್ಕಾಡಿ, ಅಣ್ಣಿ ಪೂಜಾರಿ ಬೆಟ್ಟುಗದ್ದೆ, ಪಿ.ಯುವರಾಜ ಆಳ್ವ, ನವೀನ್ಚಂದ್ರ ಶೆಟ್ಟಿ, ಯತೀಶ್ ಶೆಟ್ಟಿ, ಭಾರತಿ ಎಸ್.ರೈ, ಆನಂದ ಆಚಾರ್ಯ, ಅನಂತ ಪೈ, ಶ್ರೀಧರ ಜಿ.ಪೈ, ಜಯಾನಂದ್ರ ಬೊಳ್ಮಾರು, ರಮಾನಂದ್ರ ಬೆದ್ರಕಾಡು ಮೊದಲಾದವರಿದ್ದು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.