Friday, April 5, 2024

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಗೆ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಆಯ್ಕೆ

ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೨೦ನೇ ಸಾಲಿನ ಗೌರವ ಪ್ರಶಸ್ತಿಗೆ ರಾಮಚಂದರ್ ಬೈಕಂಪಾಡಿ (ತುಳು ಸಾಹಿತ್ಯ), ತುಂಗಪ್ಪ ಬಂಗೇರ (ತುಳು ನಾಟಕ), ಆನಂದ ಪೂಜಾರಿ ಹಳೆಯಂಗಡಿ (ತುಳು ಜಾನಪದ) ಆಯ್ಕೆಯಾಗಿದ್ದಾರೆ.

೨೦೧೯ನೇ ಸಾಲಿನ ಗೌರವ ಪ್ರಶಸ್ತಿಗೆ ಡಾ|ಎಸ್.ಆರ್.ವಿಘ್ನರಾಜ್ ಧರ್ಮಸ್ಥಳ (ತುಳು ಸಾಹಿತ್ಯ), ದಿ|ತಿಮ್ಮಪ್ಪ ಗುಜರನ್ ತಲಕಳ (ತುಳು ಯಕ್ಷಗಾನ), ಗುರುವ ಕೊರಗ ಹಿರಿಯಡ್ಕ (ತುಳು ಜಾನಪದ) ಆಯ್ಕೆಯಾಗಿದ್ದಾರೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ತಿಳಿಸಿದ್ದಾರೆ. ಅಕಾಡೆಮಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮ನೇ ಸಾಲಿನಲ್ಲಿ ಘೋಷಣೆಯಾಗಿದ್ದ ಲಲಿತಾ ಆರ್.ರೈ (ತುಳು ಸಾಹಿತ್ಯ), ರತ್ನಾಕರ ರಾವ್ ಕಾವೂರು (ತುಳು ನಾಟಕ), ಎ.ಕೆ.ವಿಜಯ್ (ತುಳು ಸಿನೆಮಾ) ಅವರಿಗೆ ಗೌರವ ಪ್ರಶಸ್ತಿಯನ್ನು ಮಾ.೭ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಗುವುದು. ಗೌರವ ಪ್ರಶಸ್ತಿ ೫೦ ಸಾವಿರ ರೂ., ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ ಎಂದರು. ಪುಸ್ತಕ ಬಹುಮಾನ ೨೦೨೦ನೇ ಸಾಲಿನ ತುಳು ಕವನ ವಿಭಾಗದಲ್ಲಿ ಡಾ| ಕೆ.ಚಿನ್ನಪ್ಪ ಗೌಡರ `ಕೆಲೆಪು ಪೆರಡೆ ಕೆಲೆಪು’, ೨೦೧೯ನೇ ಸಾಲಿನಲ್ಲಿ ತುಳು ಕವನ ವಿಭಾಗದಲ್ಲಿ ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಅವರ `ಪನಿ ಮುತ್ತು ಮಾಲೆ’ ಹಾಗೂ ೨೦೧೮ನೇ ಸಾಲಿನಲ್ಲಿ ತುಳು ಕವನ ವಿಭಾಗದಲ್ಲಿ ಶಾಂತಾರಾಮ್ ವಿ ಶೆಟ್ಟಿ ಅವರ `ಮಣ್ಣ ಬಾಜನೊ’, ರಾಜಶ್ರೀ ಟಿ.ರೈ ಪೆರ್ಲ ಅವರ ತುಳು ಕಾದಂಬರಿ `ಕೊಂಬು’ ಆಯ್ಕೆಯಾಗಿದೆ. ಪುಸ್ತಕ ಬಹುಮಾನ ೨೫ ಸಾವಿರ ರೂ., ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ. ೨೦೨೦ನೇ ಸಾಲಿನಲ್ಲಿ ವಿಶೇಷ ಬಾಲ ಪ್ರತಿಭೆ ವಿಭಾಗದಲ್ಲಿ ತುಳುನಾಡ ಯೋಗ ಕ್ಷೇತ್ರದಲ್ಲಿ ತನುಶ್ರೀ ಪಿತ್ರೋಡಿ, ತುಳುನಾಡ ಕಲಾ ಕ್ಷೇತ್ರ ಸನ್ನಿಽ ಟಿ.ರೈ ಪೆರ್ಲ, ತುಳು ಜಾನಪದ ಕ್ಷೇತ್ರ ತಕ್ಷಿಲ್ ದೇವಾಡಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ೧೦ ಸಾವಿರ ರೂ., ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟಾçರ್ ರಾಜೇಶ್ ಜಿ. ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಯುವ ಪ್ರತಿಭೆಗೆ ಆಯ್ಕೆ ೨೦೨೦ನೇ ಸಾಲಿನ ಯುವ ಪ್ರತಿಭೆ ವಿಭಾಗದಲ್ಲಿ ತುಳು ಭಾಷಾ ಸಂಘಟಕ ಯೋಗೀಶ್ ಶೆಟ್ಟಿ ಜೆಪ್ಪು, ತುಳು ನಿರೂಪಣ ಕ್ಷೇತ್ರದಲ್ಲಿ ನವೀನ್ ಶೆಟ್ಟಿ ಎಡ್ಮೆಮಾರ್, ತುಳು ಜಾನಪದ ಕಲಾ ಸಂಘಟಕ ರಮೇಶ್ ಪಿ.ಮೆಟ್ಟಿನಡ್ಕ, ತುಳುನಾಡ ದೈವ ಕ್ಷೇತ್ರದ ಸಂಶೋಧಕ ನಾಗರಾಜ ಭಟ್ ಬಂಟ್ವಾಳ, ತುಳುನಾಡ ಕಲಾ ಪೋಷಕ ಭರತ್ ಸೌಂದರ್ಯ, ತುಳು ಶಾಸನ ಸಂಶೋಧನ ಕ್ಷೇತ್ರ ಸುಭಾಷ್ ನಾಯಕ್ ಬಂಟಕಲ್, ತುಳು ಲಿಪಿ ಪರಿಶೋಧಕ ದೀಪಕ್ ಪಡುಕೋಣೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ೨೦೨೦ನೇ ಸಾಲಿನ ಸಂಘಟನ ಪ್ರಶಸ್ತಿಗೆ ತುಳು ಕೂಟ ಕುವೈಟ್, ತುಳು ಸಂಘ ಬರೋಡ, ಬೆಂಗಳೂರು ತುಳು ಕೂಟ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು-ಹಳೆಯಂಗಡಿ, ತುಳುಕೂಟ ಉಡುಪಿ ಆಯ್ಕೆಯಾಗಿದೆ ಎಂದು ದಯಾನಂದ ಜಿ. ಕತ್ತಲ್‌ಸಾರ್ ತಿಳಿಸಿದ್ದಾರೆ.

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...