ಬಂಟ್ವಾಳ: ‘ಮಕ್ಕಳು ಪಾಲಕರ ಆಸ್ತಿ’. ಮಕ್ಕಳೆಂಬ ಆಸ್ತಿಗೆ ಮೌಲ್ಯ ತುಂಬಬೇಕಾದರೆ ಪ್ರೀತಿ, ಸಮಯ, ಮಾರ್ಗದರ್ಶನ ಮಾಡಬೇಕು. ಮಕ್ಕಳು ಕೆಟ್ಟ ಗುಣಗಳನ್ನು ದೂರ ಮಾಡಬೇಕು. ಪ್ರತಿಯೊಂದು ಮಗುವು ಸಣ್ಣ ಪ್ರಾಯದಲ್ಲಿ ಮುಗ್ಧತೆ ಇರುತ್ತದೆ. ಅದನ್ನುತಿದ್ದಿದಾಗ ಮಾತ್ರ ಗುಣಗಳನ್ನು ಬೆಳೆಸುತ್ತದೆ ಎಂದು ತುಂಬೆ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವರು ಅಭಿಪ್ರಾಯ ಪಟ್ಟರು. ಅವರು ಕಾಲೇಜಿನ ಶಬನಬ್ಲಾಕ್ನಲ್ಲಿ ನಡೆದ ಪಿ.ಯು.ಸಿ. ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಂಘದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ್ ಶೆಟ್ಟಿ ಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಬೇಕಾದರೆ, ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಸನ್ನಡತೆ ಸದಾಚಾರಗಳನ್ನು ರೂಢಿಸಿಕೊಳ್ಳಬೇಕು. ಆಗ ಅವರಿಗೆ ಕಲಿಕೆಯು ಸುಲಭವಾಗಿ, ಅವರ ಭವಿಷ್ಯತ್ತಿನ ಜೀವನವು ಸುಖದಾಯಕವಾಗುತ್ತದೆ ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಉಪನ್ಯಾಸಕ ವಿ.ಎಸ್.ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪನ್ಯಾಸಕಿ ಕವಿತಾ ನಿರೂಪಿಸಿ, ಕನ್ನಡ ಉಪನ್ಯಾಸಕ ಅಬ್ದುಲ್ರಹಿಮಾನ್ಡಿ.ಬಿ. ವಂದಿಸಿದರು. ಡಾ| ವಿಶ್ವನಾಥಪೂಜಾರಿ, ಅಮಿತಾ ಕುಮಾರಿ, ಶರ್ಮಿಳಾ, ಪ್ರಫುಲ್ಲ, ಸಾಯಿರಾಂಜೆ. ನಾಯಕ್, ನೀತಾಶ್ರೀ, ಕುಮಾರಿಡಯಾನಾ ಮೊದಲಾದ ಬೋಧಕ ವೃಂದದವರು ಉಪಸ್ಥಿತರಿದ್ದರು. ಅಶೋಕ್ ಕಾರ್ಯಕ್ರಮಕ್ಕೆ ಸಹಕರಿಸಿದರು.