Monday, April 8, 2024

ಬಂಟ್ವಾಳ ತಾಲೂಕು ಎಸ್‌.ಟಿ.ಎಸ್.ಸಿ. ಕುಂದು ಕೊರತೆಗಳ ಸಭೆ

ಬಂಟ್ವಾಳ: ಬಂಟ್ವಾಳ ತಾಲೂಕು ಎಸ್‌.ಟಿ.ಎಸ್.ಸಿ .ಕುಂದುಕೊರತೆಗಳ ಸಭೆ ತಹಶೀಲ್ದಾರ್ ರಶ್ಮಿ.ಎಸ್.ಆರ್.ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ನಡೆಯಿತು. ಎಸ್.ಸಿ.ಎಸ್.ಟಿ .ಅವರ ಸವಲತ್ತುಗಳ ಬಗ್ಗೆ ಪೂರ್ಣ ಮಾಹಿತಿ ಇರುವ ಪುಸ್ತಕವನ್ನು ಯಾಕೆ ಸಮುದಾಯದ ಎಲ್ಲರಿಗೂ ನೀಡಿಲ್ಲ ಎಂದು ವಿಶ್ವನಾಥ ಚೆಂಡ್ತಿಮಾರ್ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಸರಪಾಡಿ ಗ್ರಾ.ಪಂ.ನ ಬೀಯಪಾದೆ ಪೆರ್ಲದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ಕೆ 1995 ರಲ್ಲಿ ಅರ್ಜಿ ನೀಡಲಾಗಿದೆ ಆದರೆ 7 ವಿ.ಎ.ಗಳು ಬದಲಾವಣೆ ಆದರೂ ಈವರೆಗೆ ಆರ್‌ಟಿಸಿ ನೀಡಿಲ್ಲ. ಮತ್ತು ಬೀಯಪಾದೆಯಲ್ಲಿ ಒಟ್ಟು 30 ಮನೆಗಳಿದ್ದು ಸ್ಮಶಾನ ನಿರ್ಮಾಕ್ಕೆ 30 ವರ್ಷಗಳಿಂದ ಅರ್ಜಿ ನೀಡುತ್ತಲೇ ಬಂದಿದ್ದೇವೆ ಈ ವರಗೆ ಮಂಜೂರಾತಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಒಂದು ವರ್ಷದಿಂದ ಸಭೆ ಯಾಕೆ ಕರೆಯಲಿಲ್ಲ ಎಂದು ಗಂಗಾದರ ಅವರು ಪ್ರಶ್ನಿಸಿದರು. ಈ ಪ್ರಶ್ನೆ ಗೆ ಉತ್ತರಿಸಿದ ತಹಶೀಲ್ದಾರ್ ರಶ್ಮಿ ಅವರು ಕೋವಿಡ್ ಮಾರ್ಗಸೂಚಿ ಯಂತೆ ಮೀಟಿಂಗ್ ಕರೆಯಲಾಗಿಲ್ಲ, ಮತ್ತು ಬಳಿಕ ಡಿಸೆಂಬರ್ ನಲ್ಲಿ ದಿನ ನಿಗದಿಯಾಗಿತ್ತು ಆದರೆ ಗ್ರಾ.ಪಂ.ಚುನಾವಣೆ ಡಿಕ್ಲೇರ್ ಆದ ಕಾರಣ ಸಭೆಯನ್ನು ಮುಂದೂಡಲಾಗಿತ್ತು.

ಡಿ.ಸಿ.ಮನ್ನಾ ಜಾಗವನ್ನು ಎಸ್.ಸಿ.ಎಸ್.ಟಿಯವರಿಗೆ ಮಂಜೂರಾತಿ ಮಾಡುವ ಪ್ರಕ್ರಿಯೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಕೇವಲ ಭರವಸೆ ಗಳನ್ನು ಮಾತ್ರ ನೀಡಲಾಗುತ್ತಿದೆ.

ಡಿ.ಸಿ.ಮನ್ನಾ ಜಾಗದಲ್ಲಿ ಹಕ್ಕು ಪತ್ರ ನೀಡುವ ಬಗ್ಗೆ ಜನಾರ್ಧನ ಬೊಳಂತೂರು ಪ್ರಶ್ನಿಸಿದರು. ಡಿ.ಸಿ.ಮನ್ನಾ 247 ಎಕರೆ ಜಾಗದಲ್ಲಿ ಗಿಡಗಳನ್ನು ಹಾಕಲಾಗಿದೆ.

ಗಿಡಗಳನ್ನು ಕಟಾವು ಮಾಡುವಂತೆ ಡಿ.ಸಿ.ಇಬ್ರಾಹಿಂ ಅದೇಶ ಮಾಡಿದ್ದರು, ಇದು ಇನ್ನು ಕೂಡ ಕಟಾವು ಆಗಿಲ್ಲ , ಈ ವರೆಗೆ ಜಾರಿಯಾಗಿಲ್ಲ ಇವರಿಗೆ ಕಾಯ್ದೆ ಅನ್ವಯವಾಗುದಿಲ್ಲವೇ ಎಂದು ಪ್ರಶ್ನಿಸಿದರು.

ಆದೇಶದಲ್ಲಿ ಏನು ಇದೆ ಎಂಬುದನ್ನು ನೋಡಿ ಕಟಾವಿಗೆ ಬಂದ ವೇಳೆ ಜಂಟಿ ಸರ್ವೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಸಾರಿಗೆ ಇಲಾಖೆಯಷವರು ನಮ್ಮ ಮೀಟಿಂಗ್ ಗೆ ಯಾಕೆ ಬಂದಿಲ್ಲ ಅ ಇಲಾಖೆಗೆ ಪ್ರಶ್ನೆ ಗಳಿಗೆ ಯಾರು ಉತ್ತರ ಕೊಡುವುದು ಎಂದು ವಿಶ್ವನಾಥ ಅವರು ಪ್ರಶ್ನಿಸಿದರು.

ಎಲ್ಲಾ ಬಸ್ ಗಳಲ್ಲಿ ಜ್ಯೋತಿ ಸರ್ಕಲ್ ಅಂತ ಇದೆ ಅದು ಅಂಬೇಡ್ಕರ್ ವೃತ್ತ ವಾಗಬೇಕು ಈ ಬಗ್ಗೆ ಬಂಟ್ವಾಳ ಆರ್.ಟಿ.ಓ.ಕಚೇರಿಯಿಂದ ಪತ್ರ ಕಳುಹಿಸಬೇಕು ಕೂಡಲೇ ಅಂಬೇಡ್ಕರ್ ವೃತ್ತ ಆಗಬೇಕಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಪಣೋಲಿಬೈಲು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ಬರುವ ವರ್ಷದಲ್ಲಿ ಸಂಪೂರ್ಣ ಕೃಷಿಗೆ ಉಪಯುಕ್ತ ವಾಗುವ ನಿಟ್ಟಿನಲ್ಲಿ ನೀರು ನಿಲ್ಲಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಇದೇ ತೋಡಿಗೆ ತ್ಯಾಜ್ಯ ಕೊಳಕು ನೀರು ಕೂಡ ಬರುತ್ತಿದ್ದು, ಈ ನೀರಿಗೆ ತ್ಯಾಜ್ಯ ಬರದಂತೆ ತ್ಯಾಜ್ಯ ವಿಲೇವಾರಿ ಮಾಡುವ ಕೆಲಸ ಕೂಡ ಸಂಬಂಧಿಸಿದ ಇಲಾಖೆಯಿಂದ ಆಗಬೇಕಾಗಿದೆ.

ಅಂಬೇಡ್ಕರ್ ನಿಗಮ ದ ಮೂಲಕ ಸ್ವ ಉದ್ಯೋಗ ಮಾಡುವ ಉದ್ದೇಶದಿಂದ ಅನೇಕ ಬಾರಿ ಅರ್ಜಿ ನೀಡಿದ್ದೇವೆ ಆದರೆ ಈವರಗೆ ಯಾವುದೇ ಯೋಜನೆ ಗಳು ಅಥವಾ ಉದ್ಯೋಗ ಮಾಡುವ ಅವಕಾಶಗಳನ್ನು ಇಲಾಖೆ ನೀಡಿಲ್ಲ ಎಂದು ಆರೋಪ ಮಾಡಿದರು.

ಡಿ.ಸಿ.ಮನ್ನಾ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರಲ್ಲಿ ಕೇಳಿದಾಗ ಅವರಿಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಸತೀಶ್ ಅರಳ ಪ್ರಶ್ನಿಸಿದರು. ಮೀಟಿಂಗ್ ಬರುವುದು ಯಾಕೆ ಟೀ.ಕುಡಿದು ಹೋಗುದಕ್ಕಾ, ಅಥವಾ ನಮಗೆ ನ್ಯಾಯ ಸಿಗಬೇಕಾ, ಈ

ಯಾರಿಂದ ಆಗುತ್ತದೆ ಎಂದು ಗಂಗಾಧರ ಅವರು ಸಭೆಯಲ್ಲಿ ಪ್ರಶ್ನಿಸಿದರು. ಒಂದೇ ಆರ್.ಟಿ.ಸಿ. ವಾಹನದ ಒಂದೇ ಲೋನ್ ಮಾತ್ರ ಎರಡು ಇದು ಹೇಗೆ ಸಾಧ್ಯ ಇಂತಹ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ವಾಹನ ಮಾಲಕನಿಗೆ ಗೊತ್ತಿಲ್ಲದ ರೀತಿಯಲ್ಲಿ ಅಕ್ರಮವಾಗಿ ಸಾಲ ಮಾಡುವ ನಕಲಿ ಜಾಲವೊಂದು ಇಲ್ಲಿ ಇದ್ದು ಇದರ ಬಗ್ಗೆ ಪೋಲೀಸರು ಹೆಚ್ಚು ಗಮನ ಹರಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ಸಭೆಯಲ್ಲಿ ತಾ.ಪ..ಇ.ಒ ರಾಜಣ್ಣ, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಉಪಸ್ಥಿತರಿದ್ದರು.

More from the blog

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...

ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಜನಸಂಪರ್ಕ ಸಭೆ

ಬಂಟ್ವಾಳ: ಲೋಕಾಯುಕ್ತ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಜನಸಂಪರ್ಕ ಸಭೆ ಬಿಸಿರೋಡಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಎ. 8 ರಂದು ಸೋಮವಾರ ಲೋಕಾಯುಕ್ತ ಡಿ.ವೈ.ಎಸ್.ಪಿ. ಗಾನ ಕುಮಾರಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ...