ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕುಲಾಲ ಸೇವಾ ಸಂಘ ತುಂಬೆ ಜತೆಯಾಗಿ ತುಂಬೆ ಹಿಂದೂ ರುದ್ರಭೂಮಿ ಪರಿಸರ ಸ್ವಚ್ಛತೆಯ ಶ್ರಮದಾನ ನಡೆಸಿದರು.
ಅಧ್ಯಕ್ಷರಾದ ಸುಂದರ್ ಬಿ ಯವರು ಶ್ರಮದಾನ ಉದ್ಘಾಟಿಸಿ ಮಾತನಾಡುತ್ತ ಜಾತಿ ಸಂಘಗಳು ಜಾತಿಗೆ ಸೀಮಿತ ವಾಗದೆ ಇಂತಹ ಇಂತಹ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ತುಂಬೆ ಕುಲಾಲ ಸೇವಾ ಸಂಘದ ವತಿಯಿಂದ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರಮದಾನದಲ್ಲಿ ಹಿರಿಯ ನಾಗರೀಕರಾದ ವಿಠ್ಠಲ ಬಂಗೇರ, ಪದ್ಮನಾಭ ಯಂ., ಸೋಮಪ್ಪ ಮೂಲ್ಯ, ಕೃಷ್ಣಶ್ಯಾಮ್, ಜನಾರ್ಧನ ಸಾಲಿಯಾನ್, ಒಬಯ್ಯ ಮೂಲ್ಯ,ಡೊಂಬಯ ಮೂಲ್ಯ, ತುಂಬೆ ಸಂಘದ ಅಧ್ಯಕ್ಷರಾದ ಐತಪ್ಪ ಕುಲಾಲ್ ಪದಾಧಿಕಾರಿಗಳಾದ ನೀಲಪ್ಪ ಸಾಲಿಯಾನ್, ಲಿಂಗಪ್ಪ ಕುಲಾಲ್, ಸಂದೀಪ್ ಮುದಲ್ಮೆ ಹರೀಶ್ ಪೆರ್ಲಬೈಲ್, ಸದಾನಂದ ಕುಲಾಲ್, ಭಾಸ್ಕರ್ ಕುಲಾಲ್, ಕೃಷ್ಣ ಕುಲಾಲ್, ವಿಜಯ್ ಕುಲಾಲ್, ಗೌರೀಶ್ ಕುಲಾಲ್, ಅಶೋಕ್ ಕುಲಾಲ್, ನಾಗೇಶ್ ಕುಲಾಲ್, ತಿಮ್ಮಪ್ಪ ಬೆಲ್ಚಾಡ ಹಾಗೂ ಸಂಘದ ಮಹಿಳಾ ಘಟಕದ ಭಾರತಿ ಶೇಷಪ್ಪ, ಉಮಾವತಿ ಲಿಂಗಪ್ಪ, ಶೋಭಾ ಭಾಸ್ಕರ್, ಶೋಭಾ ಸದಾನಂದ, ಕಲ್ಯಾಣಿಯವರು ಹಾಗೂ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಸುವರ್ಣ ಹಾಗೂ ಕುಲಾಲ ಯುವವೇದಿಕೆ ಗೌರವಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ್ ಹಾಗೂ ಪದಾಧಿಕಾರಿಗಳು ಭೇಟಿ ನೀಡಿದರು. ಎಲ್ಲರಿಗೂ ಗೋಪಾಲ್ ಬೆದ್ರಾಡಿ ಯವರು ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು. ಶೇಷಪ್ಪ ಮಾಸ್ಟರ್ ಸ್ವಾಗತಿಸಿ ವಂದಿಸಿದರು.