ಬಂಟ್ವಾಳ : ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ – ಎಸ್.ಎಸ್.ಎಫ್ ಸಾಲೆತ್ತೂರ್ ಸೆಕ್ಟರ್ ವತಿಯಿಂದ ಸೆಕ್ಟರ್ ಪದಾಧಿಕಾರಿಗಳು ಹಾಗೂ ಸೆಕ್ಟರ್ ವ್ಯಾಪ್ತಿಯ ಯುನಿಟ್’ಗಳ ಪದಾಧಿಕಾರಿಗಳಿಗೆ ತಮ್ರೀನ್ ಕಾರ್ಯಕ್ರಮವು ಬಿ.ಎಚ್ ನಗರ ಮದ್ರಸ ಸಭಾಂಗಣದಲ್ಲಿ ಆದಿತ್ಯವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷರಾದ ನಾಸಿರ್ ಲತೀಫಿ ಅಧ್ಯಕ್ಷತೆ ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ನೌಫಳ್ ಕಟ್ಟತ್ತಿಲ ಸ್ವಾಗತಿಸಿದರು, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರು, ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ತುರ್ಕಳಿಕೆಯವರು ಕಡತ ನಿರ್ವಹಣೆ, ಜವಾಬ್ದಾರಿ ಮತ್ತು ಸಮರ್ಪಿತ ನಾಯಕತ್ವ ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು, ಅಕ್ಬರ್ ಅಲಿ ಮದನಿ ಆಲಂಪಾಡಿ, ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಲೀ ಮದನಿ ಸೆರ್ಕಳ, ಬಿ.ಎಚ್ ಖತೀಬರು ಉಪಸ್ಥಿತರಿದ್ದರು, ಸೆಕ್ಟರ್ ಕಾರ್ಯದರ್ಶಿ ಹಾಫಿಲ್’ರವರು ವಂದಿಸಿದರು.