ಬಂಟ್ವಾಳ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಕೃತಿಯ ಜೊತೆ ಬೆರೆಯುವ ಅವಕಾಶ ಪಡೆದಿದ್ದು, ಹೆಚ್ಚು ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಮಣಿನಾಲ್ಕೂರು ಸರಕಾರಿ ಪದವಿ ಪೂರ್ವಕಾಲೇಜಿನ 67 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ಹಾಗೂ ಒಟ್ಟು 1.25 ಕೋಟಿ ವೆಚ್ಚದ ವಿವಿಧ ಕಾಮಾರಿಗಳ ಉದ್ಘಾಟಿಸಿ ಬಳಿಕ ನಡೆದ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪುಣ್ಯವಂತರು ಮತ್ತು ಬಹಳಷ್ಟು ಸಾಧನೆ ಮಾಡಲು ಅವಕಾಶ ಸಿಕ್ಕಿದೆ.
ಗ್ರಾಮೀಣ ಭಾಗದ ಜನತೆ ಈ ಕಾಲೇಜಿನ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಗೆ ಸಹಕಾರ ನೀಡಿ. ಶಾಸಕನಾಗಿ ನಾನು ಈ ಭಾಗದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂಬ ಭರವಸೆ ನೀಡಿದರು.
ಮೂವತ್ತು ವರ್ಷ ಗಳ ಬಳಿಕ ಹೊಸ ಕಟ್ಟಡದಲ್ಲಿ ಕಾಲೇಜು ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಪಡೆದಿರುವುದು ಸಂತಸ ತಂದಿದೆ.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ಕಾಲೇಜು ಸಮಿತಿ ಸದಸ್ಯ ಸಂದರ್ಶನ ಬಜ, ಧರಣೇಂದ್ರ ಜೈನ್, , ಗ್ರಾ.ಪಂ ಸದಸ್ಯ ರಾದ ರಾಮಕೃಷ್ಣ ಮಯ್ಯ, ಗೀತಾ, ಶಾಂತಪ್ಪ ಪೂಜಾರಿ , ಧನಂಜಯ ಸರಪಾಡಿ, ದಯಾನಂದ ನಾಯ್ಕ, ಜಿ ಎಮ್. ಫಾರೂಕ್, ಚಿದಾನಂದ ರೈ, ಪುರುಷೋತ್ತಮ ಮಜಲು, ಸರೋಜಿನಿ, ದಿನೇಶ್ ಗೌಡ, ಪಿ.ಡಬ್ಲೂ.ಡಿ.ಇಂಜಿನಿಯರ್ ಅಮೃತ್ ಕುಮಾರ್, ಉದ್ಯಮಿ ಜಯಪ್ರಕಾಶ್, ಸ್ಟೇಟ್ಸ್ ಕಂಪೆನಿ ಯ , ಎಚ್.ಆರ್.ಅಫೀಸರ್ ಭರತ್, ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ರಮನಾಥ ರಾಯಿ, ಪ್ರಮುಖರಾದ ರವೀಂದ್ರ ಶೆಟ್ಟಿ ಕಯ್ಯಾಳ, ನಾಗೇಶ್ ಅಗರಗಂಡಿ, ಮತ್ತಿತರ ರು ಉಪಸ್ಥಿತರಿದ್ದರು.
ಸಮಿತಿ ಉಪಾಧ್ಯಕ್ಷ ಪೂವಪ್ಪ ಪೂಜಾರಿ ಕಡಂಬಾಜೆ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಪ್ರಾಂಶುಪಾಲೆ ಸ್ಮಿತಾ ಸ್ವಾಗತಿಸಿದರು. ಉಪನ್ಯಾಸಕಿ ಅಮೃತ ಕೊಡಿಯಾಲ್ ಬೈಲು, ಉಪನ್ಯಾಸಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.