ಬಂಟ್ವಾಳ: ಮುಖ್ಯಮಂತ್ರಿ ಪದಕ ಪುರಸ್ಕಾರವನ್ನು ಸ್ವೀಕರಿಸಿದ ಬಂಟ್ವಾಳ ವೃತ್ತ ಪೊಲೀಸ್ ನಿರೀಕ್ಷಕರಾದ ಟಿ ಡಿ ನಾಗರಾಜ್ ರವರನ್ನು ಬಂಟ್ವಾಳ ಯುವಮೋರ್ಚಾ ಕಾರ್ಯಕರ್ತರು ಶಾಲು ಹೊದಿಸಿ ಸನ್ಮಾನವನ್ನು ನಡೆಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಯುವ ಮೋರ್ಚಾ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು, ಉಪಾಧ್ಯಕ್ಷರಾದ ಸುರೇಶ್ ಕೋಟ್ಯಾನ್,ಪ್ರಮೋದ್ ನೂಜಿಪ್ಪಡಿ, ವಿನೋದ್ ಪಟ್ಲ , ಕಾರ್ತಿಕ್ ಬಲ್ಲಾಳ್, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಕಿಶೋರ್ ಪಲ್ಲಿಪ್ಪಾಡಿ, ವಿನಿತ್ ಶೆಟ್ಟಿ ಪೇರಾಜೆ, ಕಾರ್ಯದರ್ಶಿಗಳಾದ ನಿಶಾಂತ್ ಶೆಟ್ಟಿ,ದಯಾನಂದ, ಹಾಗೂ ಸದಸ್ಯರಾದ ಯತಿನ್ ಶೆಟ್ಟಿ ಉಪಸ್ಥಿತರಿದ್ದರು.