ಸಿದ್ದಕಟ್ಟೆ: ಬಂಟ್ವಾಳ ತಾಲೂಕು ಸಿದ್ಧಕಟ್ಟೆಯ ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮ ಶ್ರೀ ಕುಡುಪು ನರಸಿಂಹ ತಂತ್ರಿ ಅವರ ನೇತೃತ್ವದಲ್ಲಿ ವರ್ಷಾವಧಿ ಮಹೋತ್ಸವ ಬುಧವಾರ ಸಂಪನ್ನಗೊಂಡಿತು.
ಕ್ಷೇತ್ರದ ಪ್ರ. ಅರ್ಚಕ ಪ್ರಭಾಕರ ಐಗಳ್ ಅವರ ಸಹಕಾರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಫೆ.೨೨ರಂದು ಶ್ರೀ ಮಹಮ್ಮಾಯಿ ದೇವರ ಪಂಚ ಲೋಹದ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನಡೆಯಿತು. ಫೆ.೨೩ರಂದು ಚಂಡಿಕಾ ಯಾಗ, ನವಕ ಕಲಶಾಭಿಷೇಕ, ಗಣ ಹೋಮ, ನಾಗದೇವರ ಸನ್ನಿಽಯಲ್ಲಿ ಆಶ್ಲೇಷಾ ಬಲಿ, ಮಹಾ ಪೂಜೆ, ದೈವಗಳ ಭಂಡಾರ ಆರೋಹಣ, ಸಂಜೆ ಮಹಿಷಂದಾಯನ ನೇಮ, ರಾತ್ರಿ ಕಟ್ಟೆಯಿಂದ ಕ್ಷೇತ್ರಕ್ಕೆ ಬಿಂಬದ ಶೋಭಾಯಾತ್ರೆ ನಡೆಯಿತು. ಬಳಿಕ ರಂಗಪೂಜೆ, ಶ್ರೀ ಧೂಮಾವತಿ-ಬಂಟ ದೈವಗಳ ನೇಮೋತ್ಸವ, ದೇವರ ಬಲಿ ಉತ್ಸವ, ಶ್ರೀ ಮಹಮ್ಮಾಯಿ ದರ್ಶನ, ರಾಶಿ ಪೂಜೆ ನಡೆಯಿತು.
ಫೆ.೨೪ರಂದು ಸಂಜೆ ವಾರಾಹಿ ದೈವದ ನೇಮ, ರಂಗ ಪೂಜೆ, ಭಂಡಾರ ಅವರೋಹಣ ನಡೆಯಿತು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ,ತಾ.ಪಂ.ಮಾಜಿ ಸದಸ್ಯ ರತ್ನಕುಮಾರ್ ಚೌಟ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾ. ಪಂ.ಅಧ್ಯಕ್ಷ ಸತೀಶ್ ಪೂಜಾರಿ ಹಲಕ್ಕೆ, ಉಪಾಧ್ಯಕ್ಷೆ ವಿಮಲಾ ಮೋಹನ್, ಪಂ.ಅ.ಅಽಕಾರಿ ಪದ್ಮಾ ನಾಯಕ್, ಗ್ರಾ.ಪಂ.ಸದಸ್ಯರು, ದೇಗುಲದ ಗುರಿಕಾರರಾದ ಚಂದ್ರಹಾಸ ಗುರಿಕಾರ ಸಿದ್ದಕಟ್ಟೆ, ಪಿ.ಶ್ರೀನಿವಾಸ ಶೆಟ್ಟಿಗಾರ್ ಕಾಟಿಪಳ್ಳ, ಗಂಗಾಧರ ಗುರಿಕಾರ ಬೆಳ್ಮ, ಮಹಾಬಲ ಗುರಿಕಾರ ಹೊಕ್ಕಾಡಿಗೋಳಿ, ಮೊಕ್ತೇಸರರು, ಜೀರ್ಣೊದ್ಧಾರ ಸಮಿತಿ, ಭಜನ ಸಮಿತಿ, ಮಹಿಳಾ ವೇದಿಕೆ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.