ಬಂಟ್ವಾಳ: ಕನ್ನಡ ವಿಶ್ವವಿದ್ಯಾಲಯ, ಹಂಪಿ .ಒನಕೆ ಓಬವ್ವ ಅಧ್ಯಯನ ಪೀಠ ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ (ರಿ.) ಬಂಟ್ವಾಳ ಇವರ ಆಶ್ರಯದಲ್ಲಿ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ದಲ್ಲಿ ಒನಕೆ ಓಬವ್ವ ಮತ್ತು ಸ್ಥಳೀಯ ಚರಿತ್ರೆ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಫೆ.25 ರಂದು ಶುಕ್ರವಾರ ಸಂಜೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷ ತೆ ವಹಿಸಿ ಮಾತನಾಡಿದಹಂಪಿ ಕನ್ನಡ ವಿಶ್ವವಿದ್ಯಾಲಯ ದ ಕುಲಪತಿ ಡಾ! ಸ. ಚಿ.ರಮೇಶ್ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು.
ಒನಕೆ ಓಬವ್ವ , ರಾಣಿ ಅಬ್ಬಕ್ಕನ ಜೊತೆ ಸ್ಥಳೀಯ ಸಾಧನೆ ಮಾಡಿದ ಅನೇಕ ಮಹಿಳೆಯರ ಚರಿತ್ರೆಯ ನ್ನು ಅರ್ಥಮಾಡಿಕೊಳ್ಳುವ ಜರೂರು ಪ್ರಸ್ತುತ ಇದೆ , ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಇದು ನಾಂದಿಯಾಗಬಹುದು ಎಂದು ಅವರು ಹೇಳಿದರು.
ತುಕರಾಂ ಪೂಜಾರಿ ಅವರು ಕನ್ನಡ ವಿಶ್ವಾವಿದ್ಯಾಲಯದ ಜೊತೆ ರಾಣಿ ಅಬ್ಬಕ್ಕ ಕೇಂದ್ರ ಸೇರಿಕೊಂಡು ಸಂಶೋದನೆ ಕಾರ್ಯಗಳನ್ನು ಮಾಡಿ ಇನ್ನಷ್ಟು ಶೈಕ್ಷಣಿಕ ವಾಗಿಯೂ ಸಾಧನೆ ಮಾಡಿ ಎಂದು ಅವರು ಹೇಳಿದರು.
ಅಮೂಲಕ ಇನ್ನಷ್ಟು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವಿಪುಲವಾಗಿ ಬೆಳೆಯಲು ಅವಕಾಶ ಸಿಗುವ ರೀತಿಯಲ್ಲಿ ತಯಾರುಮಾಡುಬೇಕು ಎಂದು ಅವರು ಹೇಳಿದರು.
ಶಿಕ್ಷಣ ಪ್ರತಿಯೊಬ್ಬರಿಗೂ ಸಿಕ್ಕಿದಾಗ ಎಲ್ಲಾ ಕಲೆಗಳು ಅದ್ಬುತವಾಗಿ ಬೆಳೆಯಲು ಕಾರಣವಾಗುತ್ತದೆ.
ಬದುಕಿಗೆ ಬೇಕಾಗುವ ಶಿಕ್ಷಣ ಗಳು ಈ ಅಧ್ಯಯನ ಕೇಂದ್ರ ದಲ್ಲಿ ನಡೆಯಲಿ.
ಇಲ್ಲಿರುವ ವಸ್ತುಗಳ ಚರಿತ್ರೆಯನ್ನು ತಿಳಿಸುವ ಪುಸ್ತಕ ಗಳನ್ನು ಹೊರತರಬೇಕು.
ಚರಿತ್ರೆಯ ನ್ನು ಗೌರವಿಸುವ ಕೆಲಸ ಅಗಬೇಕಾಗಿದೆ ಎಂದು ಅವರು ಹೇಳಿದರು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಒನಕೆ ಒಬವ್ವನ ಬಗ್ಗೆವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಬಿ.ವೈ.ಕುಮಾರ್ ಅವರು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರವನ್ನು ಉಳಿಸಿ ಬೆಳೆಸಲು ಸರಕಾರ ಹಾಗೂ ಸಂಘಸಂಸ್ಥೆಗಳು ಪ್ರೋ.ತುಕರಾಂ ಪೂಜಾರಿ ಅವರ ಜೊತೆ ಕೈ ಜೋಡಿಸುವ ಅಗತ್ಯ ವಿದೆ ಎಂದು ಅವರು ಅತ್ಯಂತ ನೋವಿನಿಂದ ಹೇಳಿದರು.
ರಾಣಿ ಅಬ್ಬಕ್ಕ ನ ಬಗ್ಗೆ ಇನ್ನಷ್ಟು ವಿಶೇಷ ಅಧ್ಯಯನ ಆಗಬೇಕಾಗಿದೆ ಎಂದು ಅವರು ತಿಳಿಸಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕ ತುಕಾರಾಂ ಪೂಜಾರಿ ಅವರು ಸ್ಥಳೀಯ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು.ಮುಖ್ಯ ಅತಿಥಿಯಾಗಿ ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್ ಉಪಮಹಾಪ್ರಬಂಧಿಕಿ ವಿಭಾಗದ ವೀಣಾ ಶೆಟ್ಟಿನಿರ್ಮಲ ಹೃದಯ ಇದರ ಸಂಚಾಲಕ ಉದ್ಯಮಿ ಲ! ದಾಮೋದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಚಯಗಿರಿ ಪರಿಸರ ಪ್ರೇಮಿ ಎ.ದಾಮೋದರ್ ಹಾಗೂ ಪತ್ರಿಕೆ ವಿತರಕ ನರಸಿಂಹ ಪೈ ಅವರನ್ನು ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ದ ಆರಂಭದಲ್ಲಿ ಬಂಟ್ವಾಳ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಒನೆಕೆ ಓಬವ್ವ ಹಾಗೂ ತುಳು ಬದುಕನ್ನು ಬಿಂಬಿಸುವ ನೃತ್ಯ ವೈಭವ ನಡೆಯಿತು.
ಒನೆಕೆ ಓಬವ್ವ ಅಧ್ಯಯನ ಪೀಠದ ಸಂಚಾಲಕ ಡಾ! ಎ.ಶ್ರೀಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ! ಆಶಾಲತಾ ಎಸ್.ಸುವರ್ಣ ಅವರು ಸ್ವಾಗತಿಸಿದರು.