ಬಂಟ್ವಾಳ: ಖಾಸಗಿ ದೇವಾಲಯಗಳನ್ನು ಸರಕಾರ ವಶಕ್ಕೆ ಪಡೆದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂಬ ಪ್ರಚಾರ ಸತ್ಯಕ್ಕೆ ದೂರವಾದ ಮಾತು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ತಿಳಿಸಿದ್ದಾರೆ.
ಈ ವರೆಗೆ ಸರಕಾರವಾಗಲಿ ಧಾರ್ಮಿಕ ಪರಿಷತ್ ಅಗಲಿ ಅಂತಹ ಯಾವುದೇ ಯೋಚನೆ ಅಥವಾ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೂಗಳ ದೇವಾಲಯ ಗಳ ಹಿತರಕ್ಷಣೆ ಯನ್ನು ಮಾಡಬೇಕಾದ ಕರ್ತವ್ಯ ದ ಬಗ್ಗೆ ಸಾಮಾನ್ಯ ಪರಿಜ್ಞಾನ ಧಾರ್ಮಿಕ ಪರಿಷತ್ತ್ ಮತ್ತು ಸಚಿವರಿಗಿದೆ ಎಂದು ಅವರು ಹೇಳಿದರು.
2011 ನೇ ಇಸವಿ ಯಲ್ಲಿ ಕಾಯ್ದೆಗೆ ತಿದ್ದುಪಡಿ ಬಂದಿತ್ತು. ಕಲಂ ನಂ.53 ಆಧಾರವಾಗಿಟ್ಟುಕೊಂಡು ಎಲ್ಲಾ ಖಾಸಗಿ ದೇವಾಲಯ ಗಳ ಚರ ಮತ್ತು ಸ್ಥಿರ ಆಸ್ತಿಗಳ ಮಾಹಿತಿ ಸರಕಾರಕ್ಕೆ ಕೊಡುವಂತೆ ಅಂದಿನ ಸರಕಾರ ಕೇಳಿ ಸುತ್ತೋಲೆ ಕಳುಹಿಸಿತ್ತು.
ನಮ್ಮ ಈಗಿನ ಸರ್ಕಾರದ ನಿರ್ಧಾರ ಅಲ್ಲ ಎಂದ ಅವರು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಹಿಂದೂಗಳ ಹಿತರಕ್ಷಣೆ ಮಾಡು ಕೆಲಸ ಮಾಡುತ್ತೇವೆ ವಿನಹ: ಖಾಸಗಿ ದೇವಾಲಯಗಳನ್ನು ಸರಕಾರಿಕರಣ ಮಾಡುವುದಿಲ್ಲ ಎಂದು ಸೂರ್ಯನಾರಾಯಣ ಭಟ್ ತಿಳಿಸಿದ್ದಾರೆ.