ಬಂಟ್ವಾಳ : ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.) ನ ವತಿಯಿಂದ ಮೂಡಬಿದ್ರೆ ತಾಲೂಕಿನ ಪಡು ಮಾರ್ನಾಡು ನಡಿಲ್ಲ ನಡುಮನೆಯ ಬಾಲಕೃಷ್ಣ ಮತ್ತು ಕುಸುಮಾವತಿ ದಂಪತಿಗಳ 13 ವರ್ಷದ ಪುತ್ರಿ ವೈಷ್ಣವಿಯ ಚಿಕಿತ್ಸೆ ಗಾಗಿ ಪೊಳಲಿಯಲ್ಲಿ ಕಾರ್ಯಕರ್ತರು ವಿಭಿನ್ನ ವೇಷದ ಮೂಲಕ ಧನಸಂಗ್ರಾಹದ ಕಾರ್ಯದಲ್ಲಿ ತೊಡಗಿದ್ದಾರೆ.
ವೈಷ್ಣವಿ ಅವರು ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ದೇಹದ ತೀವ್ರ ವಾಗಿ ಜಖಂಗೊಂಡಿದೆ.
ಪ್ರಸ್ತುತ ಉಡುಪಿ ಯ ಆದರ್ಶ ಆಸ್ಪತ್ರೆಯ ಲ್ಲಿ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದು ಇವಳ ಚಿಕಿತ್ಸೆ ಗೆ ಸುಮಾರು 3 ಲಕ್ಷಕ್ಕೂ ಅಧಿಕ ವೆಚ್ಚದ ಅಗತ್ಯವಿದೆ.
ಬಡಕುಟುಂಬದ ಈ ಮಗುವಿನ ಚಿಕಿತ್ಸೆ ಗಾಗಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವಿಭಿನ್ನ ವೇಷ ಧರಿಸಿ ಪೊಳಲಿ ಶ್ರೀರಾಜರಾಜೇಶ್ವರಿ ದೇವಾಲಯದ ಬ್ರಹ್ನಕಲಶೋತ್ಸವದ ಸಂದರ್ಭ ಹಣ ಸಂಗ್ರಹದ ಕಾರ್ಯದಲ್ಲಿ ತೊಡಗಿದೆ.
ಪೊಳಲಿಯಲ್ಲಿ 12 ಜನರ ತಂಡ ಇಂದು ಮುಂಜಾನೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಹಣಸಂಗ್ರಹದ ಕಾರ್ಯದಲ್ಲಿ ತೊಡಗಿದ್ದರು, ಇದಲ್ಲದೆ ಇತ್ತೀಚಿಗೆ ನಡೆದ ಕಕ್ಯೆಪದವು ಬ್ರಹ್ಮ ಬೈದರ್ಕಲ ಗರಡಿಯಲ್ಲಿ ಕೂಡ ಹಣ ಸಂಗ್ರಾಹ ಮಾಡಲಾಗಿತ್ತು ಟ್ರಸ್ಟ್ ನ ಅಧ್ಯಕ್ಷ ನವೀನ್ ಪಿ.ಮಿಜಾರ್ ತಿಳಿಸಿದರು.
ಕಳೆದ 54 ತಿಂಗಳ ಹಿಂದೆ ರಚನೆಗೊಂಡ ಈ ಟ್ರಸ್ಟ್ 400 ಸೇವಾ ಯೋಜನೆಯೊಂದಿಗೆ ಸುಮಾರು 37 ಲಕ್ಷ ನೆರವನ್ನು ಸಮಾಜದ ಬೇರೆ ಬೇರೆ ಸ್ತರದ ಆಶಕ್ತರಿಗೆ ನೀಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಮಗುವಿನ ಚಿಕಿತ್ಸೆ ಗೆ ನೆರವು ನೀಡುವ ಮನಸ್ಸು ಇರುವ ವ್ಯಕ್ತಿಗಳು ದೂರವಾಣಿ ಸಂಖ್ಯೆ: 9880956086
ಹಾಗೂ ಸಿಂಡಿಕೇಟ್ ಬ್ಯಾಂಕ್ ಖಾತೆ ನಂ.02702200018893 ಇದಕ್ಕೂ ನೇರವಾಗಿ ಹಾಕಬಹುದು.