ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು, ಪೆರಾಡಿ ಗ್ರಾಮದ ಪೆರಾಡಿ ಕೂಡು ಕಟ್ಟು ಪಂಡಿಂಜೆ ಬೆಟ್ಟ ಪೆರಾಡಿ ಶ್ರೀದೈವ, ಕೊಡಮಣಿತ್ತಾಯ ಹಾಗೂ ಶ್ರೀಬ್ರಹ್ಮಬೈದರ್ಕಳ ವಾರ್ಷಿಕ ಜಾತ್ರಾಮಹೋತ್ಸವ ಇತ್ತೀಚೆಗೆ ನಡೆಯಿತು.
ವೇದ ಮೂರ್ತಿ ಶ್ರೀ.ಕೆ.ಅನಂತ ಅಸ್ರಣ್ಣರ ಪುರೋಹಿತ್ಯದಲ್ಲಿ ಪೆರಾಡಿ ಬೀಡು ರಾಜೇಂದ್ರ.ಪಿ ಹಾಗೂ ಗುತ್ತು ಬರ್ಕೆಯವರ ನೇತೃತ್ವದಲ್ಲಿ ಪೆರಾಡಿ-ಸಾವ್ಯ-ಮರೋಡಿ ಗ್ರಾಮಸ್ಥರ ಭಾಗವಹಿಸುವಿಕೆಯೊಂದಿಗೆ ಶ್ರೀದೈವಗಳ ಭಂಡಾರ ಆಗಮನ, ದರಿತೊಡರು ಹಾಗೂ ವಿವಿಧ ಧಾರ್ಮಿಕ ಕಟ್ಟಳೆಗಳಂತೆ ಜಾತ್ರೋತ್ಸವ ನಡೆಯಿತು. ದೊಲ್ದೊಟ್ಟು ಬರ್ಕೆ ಯಜಮಾನ ಸದಾನಂದ ಪೂಜಾರಿ ಮತ್ತು ಪಾರ್ಯೊಟ್ಟು ಕಿನ್ನಿ ಮೂಲ್ಯ ಇವರಿಗೆ ಅಸ್ರಣ್ಣ ಪೆರಾಡಿ ಬೀಡು ವಿಧಿವಿಧಾನದಂತೆ ದೈವ ಪಟ್ಟಿ ಪ್ರಧಾನ ಮಾಡಲಾಯಿತು. ಕುಂಟ್ಯಾನ ಕೆ. ಸದಾಶಿವ ಹೆಗ್ಡೆ ಶ್ರೀ ಕ್ಷೇತ್ರ ಮೇಕಾರು ಕುಕ್ಕಿನಂತಾಯ ದೈವದ ಗಡಿಕಾರ ಉಪಸ್ಥಿತರಿದ್ದರು. ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ನಾರಾವಿ ವಲಯ ಪೆರಾಡಿ ಪಂಡಿಂಜೆಬೆಟ್ಟು ಕ್ಷೇತ್ರದಲ್ಲಿ ದ್ವಿತೀಯ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ಪ್ರಗತಿ ಬಂಧು ಒಕ್ಕೂಟ ಮೇಲ್ವಿಚಾರಕರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿದ್ದರು.