ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ ಒಡಿಯೂರು ಶ್ರೀ ಸಂಸ್ಥಾನದಿಂದ ಗ್ರಾಮ ದೈವಸ್ಥಾನ ಮಿತ್ತನಡ್ಕಕ್ಕೆ ಹೋಗಿ ಕನ್ಯಾನ, ಪೇಟೆ ಸವಾರಿ, ನಂತರ ಸದ್ಗುರು ಶ್ರೀ ನಿತ್ಯಾನಂದ ಮಂದಿರಲ್ಲಿ ವಿಶೇಷ ಪೂಜೆಯ ಬಳಿಕ ಶ್ರೀ ಸಂಸ್ಥಾನಕ್ಕೆ ಮರಳಿದೆ. ಒಟ್ಟು ಎರಡು ಗ್ರಾಮಗಳನ್ನು ಈ ಈ ರಥ ಸಂಚರಿಸಿದೆ. ರಥಯಾತ್ರೆಯಲ್ಲಿ ಕೊಂಬು, ವಾದ್ಯ, ತಾಲೀಮ್, ವಿವಿಧ ಟ್ಯಾಬ್ಲೊ, ಸಿಡಿಮುದ್ದು, ಗಮನ ಸೆಳೆದಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್, ವಿಟ್ಲ ಸೀಮೆ, ಹಾಗೂ ವಿವಿಧ ಭಜನ ಮಂಡಳಿಗಳಿಂದ ಕುಣಿತ ಭಜನೆ ರಥಯಾತ್ರೆಯಲ್ಲಿ ಸಾಗಿದೆ.