ಕುಪ್ಪೆಪದವು : ನಿವೃತ್ತ ಮುಖ್ಯೋಪಾಧ್ಯಾಯ ಎಸ್.ನಾಗೇಶ್ ಪೂಜಾರಿ ಪೂಜಾರಿ ಬಾರ್ದಿಲ (77) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಮೂಲತಃ ಕುಪ್ಪೆಪದವು ಬಾರ್ದಿಲದವರಾದ ಇವರು ನಿವೃತ್ತಿಯ ನಂತರ ಎಡಪದವಿನಲ್ಲಿ ನೆಲೆಸಿದ್ದರು. ಮಾಂಟ್ರಾಡಿ, ಸವಣೂರು, ಇರುವೈಲು, ಅಡ್ಡೂರು ಮತ್ತು ಕುಪ್ಪೆಪದವಿನ ಕಿಲೆಂಜಾರು ಹಾಗೂ ಕಲ್ಲಾಡಿ ಶಾಲೆಗಳಲ್ಲಿ ಶಿಕ್ಷಕರಾಗಿ ,ಮುಖ್ಯೋಪಾಧ್ಯಾಯ ರಾಗಿ 37ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು ಜನಾನುರಾಗಿ ಶಿಕ್ಷಕರಾಗಿ, ಯಕ್ಷಗಾನ ಕಲಾವಿದನಾಗಿ ಹತ್ತಾರು ಧಾರ್ಮಿಕ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.