ಬಂಟ್ವಾಳ: ಬಂಟ್ವಾಳ ತಾಲೂಕಿನ ಪ್ರಸಿದ್ಧ ಮೊಗರ್ನಾಡು ಸಾವಿರ ಸೀಮೆಯ ಕಲ್ಲಡ್ಕ ನೆಟ್ಲದ ಶ್ರೀ ನಿಟಿಲಾಕ್ಷ ಸದಾಶಿವ ದೇವಾಲಯದ ವ್ಯವಸ್ಥಾಪನಾ ಸಮಿತಿ, ರಾಜ್ಯ ಧಾರ್ಮಿಕ ಪರಿಷತ್ತಿನ ಆದೇಶದಂತೆ ರಚನೆಯಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಪಿ.ಸುಬ್ರಮಣ್ಯ ಭಟ್ ಚನಿಲ ಇವರನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ದೇವಸ್ಥಾನದ ಆಡಳಿತಾಧಿಕಾರಿ ಷಣ್ಮುಗಂ ಉಪಸ್ಥಿತರಿದ್ದ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಆಯ್ಕೆ ಮಾಡಿದರು.
ಸಮಿತಿ ಸದಸ್ಯರಾದ ಪ್ರಧಾನ ಅರ್ಚಕರಾದ ವಿಜೇತ್ ಎನ್ ಹೊಳ್ಳ, ಕುಮಾರಸ್ವಾಮಿ, ಸುಜಿತ್ ಕೊಟ್ಟಾರಿ, ಅನಿಲ್ ದೇವಾಡಿಗ, ನವೀನ್ ಕುಮಾರ್ ಶೆಟ್ಟಿ ಚನಿಲ, ದಿವ್ಯಾ ರಮೇಶ್ ಪೂಜಾರಿ, ಭವ್ಯ ಐತಪ್ಪ ನಾಯ್ಕ, ಸುಚಿತ್ರ ಅನಂತ ಭಟ್ ಸಭೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಚಂದ್ರಶೇಖರ ಟೈಲರ್ ಗೋಳ್ತಮಜಲು ನೂತನ ವ್ಯವಸ್ಥಾಪನಾ ಸಮಿತಿಗೆ ಶುಭ ಹಾರೈಸಿದರು.