ವಿಟ್ಲ : ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಪ್ರೆಂಡ್ಸ್ ಸರ್ಕಲ್ ಇದರ ಅದ್ಯಕ್ಷರಾಗಿ ಲತೀಫ್ ನೇರಳಕಟ್ಟೆ ಪುನರಾಯ್ಕೆಗೊಂಡಿದ್ದಾರೆ. ಸಂಘದ ಅದ್ಯಕ್ಷ ಲತೀಫ್ ನೇರಳಕಟ್ಟೆ ಅವರ ಅದ್ಯಕ್ಷತೆಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾದ್ಯಕ್ಷರುಗಳಾಗಿ ಮಜೀದ್ ಮಾಣಿ, ರಝಾಕ್ ಸಾಹೇಬ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಪೆರಾಜೆ, ಕೋಶಾಧಿಕಾರಿಯಾಗಿ ರೋಹಿತಾಶ್ವ ಗಣೇಶನಗರ, ಜೊತೆ ಕಾರ್ಯದರ್ಶಿಗಳಾಗಿ ಝುಬೈರ್ ಪರ್ಲೊಟು, ಮುನೀರ್ ಕೆಂಪುಗುಡ್ಡೆ, ಸಂಘಟನಾ ಕಾರ್ಯದರ್ಶಿಗಳಾಗಿ ಅತಾವುಲ್ಲಾ ನೇರಳಕಟ್ಟೆ, ಇಸ್ಮಾಯಿಲ್ ಅನಂತಾಡಿ, ಕ್ರೀಡಾ ಕಾರ್ಯದರ್ಶಿಗಳಾಗಿ ಮುಹಮ್ಮದ್ ಶಿಯಾಕ್, ಬದ್ರುದ್ದೀನ್ ನೇರಳಕಟ್ಟೆ ಅವರು ಆಯ್ಕೆಯಾದರು. ಹಾಗೂ 8 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು. ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಚಂದ್ರಶೇಖರ ಪೆರಾಜೆ ವಂದಿಸಿದರು.