ಬಂಟ್ವಾಳ: ಮಂತ್ರಾಲಯ ಕ್ಕೆ ಹೋಗುವುದಾಗಿ ಚೀಟಿ ಬರೆದಿಟ್ಟು ಮನೆಯಿಂದ ಹೋದವರು ಮರಳಿ ಬಾರದೆ ವ್ಯಕ್ತಿಯೊಬ್ಬರು ಕಾಣೆಯಾಗಿದ್ದಾರೆ .
ಕುರಿಯಾಳ ನಿವಾಸಿ ವಿಠಲ ಬಂಗೇರ (62) ನಾಪತ್ತೆಯಾದವರು.
ಅವರು ಫೆ.22 ರಂದು ಮಧ್ಯಾಹ್ನ ತನ್ನ ಪತ್ನಿಯ ಬಳಿ ಬಿಸಿರೋಡಿಗೆ ಆರ್.ಟಿ.ಸಿ. ತರುವುದಕ್ಕೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದರು.
ಆದರೆ ಸಂಜೆ ವರೆಗೂ ಮರಳಿ ಬಾರದೆ ಇರುವುದನ್ನು ಕಂಡು ಪತ್ನಿ ಅವರ ಅಂಗಡಿಗೆ ತೆರಳಿ ಡ್ರಾವರ್ ನೋಡಿದಾಗ ಚೀಟಿಯೊಂದು ಪತ್ತೆಯಾಗಿದ್ದು, ನಾನು ಮಂತ್ರಾಲಯ ಕ್ಕೆ ಹೋಗುತ್ತಿದ್ದೇನೆ, ಬರುತ್ತೇನೆಯೇ , ಬರುವುದಿಲ್ಲವೋ ಗೊತ್ತಿಲ್ಲ, ಮಂದಿರದಲ್ಲಿ ಮಗುವಿನ 19 ಸಾವಿರ ಹಣಕೊಡಿ, ಅಂಗಡಿ ವ್ಯಾಪಾರ ಬೇಡ ಎಂದು ಬರೆದಿದ್ದಾರೆ.
ಈ ಕುರಿತು ಅವರನ್ನು ಕರೆದುಕೊಂಡು ಹೋದ ರಿಕ್ಷಾ ಚಾಲಕ ದಿವಾಕರನನ್ನು ವಿಚಾರಿಸಿ ದಾಗ ತಾನು ಬಿಸಿರೋಡು ತಾಲೂಕು ಕಚೇರಿವರೆಗೆ ಬಿಟ್ಟು ಬಂದಿದ್ದು ತನ್ನನ್ನು ಹಿಂದೆ ಕಳುಹಿಸಿದ್ದರು ಎಂದು ತಿಳಿಸಿದ್ದರು. ಬಳಿಕ ಮಂಗಳೂರು , ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ವಿಠಲ ಅವರು ಪತ್ತೆಯಾಗಿಲ್ಲ ಎಂದು ಅವರ ಪುತ್ರಿ ಸ್ವಾತಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿದೆ.