ಬಂಟ್ವಾಳ: ವ್ಯಕ್ತಿಯೊಬ್ಬರು ಮದುವೆಗೆ ಹೋಗುವುದಾಗಿ ಹೇಳಿ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಪಂಜಿಕಲ್ಲು ಗ್ರಾಮದ ಕೋಲ್ದೋಡಿ ನಿವಾಸಿ ಕೇಶವ ಪೂಜಾರಿ(36) ನಾಪತ್ತೆಯಾವರು.
ಅವರು ಇಂಟರ್‌ಲಾಕ್ ಕೆಲಸ ಮಾಡಿಕೊಂಡಿದ್ದು, ಜ. 3ರಂದು ಬೆಳಗ್ಗೆ 10.30ಕ್ಕೆ ಮದುವೆಗೆಂದು ತೆರಳಿದ್ದು, ಬಳಿಕ ಮರಳಿ ಬಂದಿಲ್ಲ. ನೆರೆಕರೆಯವರು, ಸಂಬಧಿಕರ ಮನೆಯಲ್ಲಿ ಹುಡುಕಿದರೂ ಅವರು ಪತ್ತೆಯಾಗಿಲ್ಲ.
ಈ ಹಿಂದೆಯೂ ಅವರು 3-4 ಬಾರಿ ಇದೇ ರೀತಿ ಮನೆ ಬಿಟ್ಟು ಹೋಗಿದ್ದು, ಹೀಗಾಗಿ ಈ ಬಾರಿಯೂ ಮರಳಿ ಬರುತ್ತಾರೆಂದು ಪೊಲೀಸರಿಗೆ ದೂರು ನೀಡಿರಲಿಲ್ಲ. ಇದೀಗ ಅವರ ಪತ್ನಿ ಯಶೋಧಾ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.