ಬಂಟ್ವಾಳ: ನಿರಂತರವಾಗಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ SDPI ಮುಖಂಡ ರಿಯಾಜ್ ಫರಂಗಿಪೇಟೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಯುವ ಮೋರ್ಚಾ ವತಿಯಿಂದ ಬಂಟ್ವಾಳ ವೃತ್ತ ಪೋಲಿಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಸಕಾರಾತ್ಮಕವಾಗಿ ಸ್ಪಂದಿಸಿದ ವೃತ್ತ ಪೋಲಿಸ್ ಆಯುಕ್ತರು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಂಟ್ವಾಳ ಯುವ ಮೋರ್ಚಾ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು, ಉಪಾಧ್ಯಕ್ಷರಾದ ಸುರೇಶ್ ಕೋಟ್ಯಾನ್, ಪ್ರಮೋದ್ ನೂಜಿಪ್ಪಡಿ, ವಿನೋದ್ ಪಟ್ಲ , ಕಾರ್ತಿಕ್ ಬಲ್ಲಾಳ್, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಕಿಶೋರ್ ಪಲ್ಲಿಪ್ಪಾಡಿ, ವಿನಿತ್ ಶೆಟ್ಟಿ ಪೇರಾಜೆ, ಕಾರ್ಯದರ್ಶಿಗಳಾದ ನಿಶಾಂತ್ ಶೆಟ್ಟಿ,ದಯಾನಂದ, ಹಾಗೂ ಸದಸ್ಯರಾದ ಯತಿನ್ ಶೆಟ್ಟಿ ಉಪಸ್ಥಿತರಿದ್ದರು.