ಬಂಟ್ವಾಳ: ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಹಸಿರು ಹೊರೆಕಾಣಿಕೆ ಮೆರವಣಿಗೆಯು ಶುಕ್ರವಾರ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಕರೆಂಕಿ ಕ್ಷೇತ್ರಕ್ಕೆ ಸಾಗಿತು.
ಕೇರಳದ ಚೆಂಡೆ ವಾಹನ, ಕಲಶ ಹಿಡಿದ ಮಹಿಳೆಯರು, ವಿವಿಧ ಭಜನಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಸುಮಾರು ೬೦ಕ್ಕೂ ಅಧಿಕ ವಾಹನಗಳ ಮೂಲಕ ಹೊರೆಕಾಣಿಕೆಯನ್ನು ಸಾಗಿಸಲಾಯಿತು. ಭಕ್ತರು ನೀಡಿದ ಸೀಯಾಳ, ತೆಂಗಿನಕಾಯಿ, ಅಕ್ಕಿ, ಹಿಂಗಾರ, ಬಾಳೆಗೊನೆ, ಅಡಿಕೆ ಮೊದಲಾದ ಸುವಸ್ತುಗಳನ್ನು ಸಮರ್ಪಿಸಲಾಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಹೊರೆಕಾಣಿಕೆಯ ಸಮಿತಿಯ ಸಂಚಾಲಕ ರಾಮದಾಸ್ ಬಂಟ್ವಾಳ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಧರ್ಣಪ್ಪ ಪೂಜಾರಿ ರಾಮನಗರ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಜೇಶ್ ಪೂಜಾರಿ ಕೊಂಗ್ರಬೆಟ್ಟು, ರಾಮಚಂದ್ರ ಶೆಟ್ಟಿ ದಂಡೆ, ಉಪಾಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬ್ರಬೈಲು, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಕರೆಂಕಿ, ಉಪಾಧ್ಯಕ್ಷ ಪೂವಪ್ಪ ಮೆಂಡನ್ ಕರೆಂಕಿ, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಹಿಂಜಾವೇ ಗೌರವಾಧ್ಯಕ್ಷ ಚಿದಾನಂದ, ವಿವಿಧ ಸಮಿತಿಗಳ ಪ್ರಮುಖರಾದ ಮನ್ಮಥ್ ಜೆ.ಶೆಟ್ಟಿ, ರಾಜೇಶ್ ನಾಯ್ಕ್ ನೆಕ್ಕರೆ, ಕೃಷ್ಣ ಟಿ.ಕನಪಾದೆ, ಪುಷ್ಪರಾಜ್ ಜಕ್ರಿಬೆಟ್ಟು, ಜಯರಾಮ ರಾಮನಗರ, ವಿಲಾಸಿನಿ ಶಾಂತವೀರ ಪೂಜಾರಿ, ವಿವಿಧ ಸಮಿತಿಗಳ ಸಂಚಾಲಕರು, ಸಹಸಂಚಾಲಕರು ಪಾಲ್ಗೊಂಡಿದ್ದರು.