ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು “ಚಿಣ್ಣರ ಲೋಕ “ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ಉತ್ಸವ ಕರಾವಳಿ ಕಲೋತ್ಸವ 2021 ಇದರ ಉದ್ಘಾಟನೆ ಬಿಸಿರೋಡಿನ ಗೋಲ್ಡನ್ ಪಾರ್ಕ್ ಮೈದಾನದ ಅಬ್ದುಲ್ ಕಲಾಂ ಕಲಾ ವೇದಿಕೆಯಲ್ಲಿ ನಡೆಯಿತು.
ಬಿಸಿರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಿಂದ ಹೊರಟ ಜಾನಪದ ದಿಬ್ಬಣದ ಮೆರವಣಿಗೆ ಯನ್ನು ಮೂಡಬಿದ್ರೆ ಆಳ್ವಾಸ್ ಸಮೂಹ ಸಂಸ್ಥೆಯ ಸಂಚಾಲಕ ಡಾ|ಎಂ. ಮೋಹನ್ ಆಳ್ವ ಉದ್ಘಾಟಿಸಿದರು.
ಬಳಿಕ ಡಾ| ಎಪಿಜೆ ಅಬ್ದುಲ್ ಕಲಾಂ ಕಲಾ ವೇದಿಕೆ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರಾವಳಿ ಕಲೋತ್ಸವ ಸಾರ್ಥಕ ಕಾರ್ಯಕ್ರಮವಾಗಿದೆ, ಇದರ ಜೊತೆ ಕೃಷಿ ಉತ್ಸವ ಜೋಡಣೆ ಮನಸ್ಸಿಗೆ ಸಂತೋಷ ನೀಡಿದೆ. ಆತಂಕಗಳನ್ನು ದೂರ ಮಾಡಿ ಸಂತೋಷ ನೀಡುವ ಕಾರ್ಯಕ್ರಮ ಆಯೋಜಿಸಿದ ಚಿಣ್ಣರಲೋಕದ ಕಾರ್ಯಕ್ರಮವೇ ಮುಂದಿನ ಕಾರ್ಯಕ್ರಮ ಗಳಿಗೆ ವೇದಿಕೆಯಾಗಲಿ.
ಸುಂದರ ಮನಸ್ಸು ಕಟ್ಟುವ ಕೆಲಸ ಇಂತಹ ಸಂಘಟನೆಗಳಿಂದ ಮಾತ್ರ ಸಾಧ್ಯವಾಗುತ್ತದೆ.
ಹಿರಿಯ ತಲೆಮಾರು ಕಾಲಕಾಲಕ್ಕೆ ಬೆವರು ಸುರಿಸಿ ಕಟ್ಟಿದ ಜಾನಪದ ಸಂಗತಿಗಳು ಸೂರ್ಯ ಚಂದ್ರ ಇರುವ ತನಕ ಉಳಿಯಬೇಕಾಗಿದೆ.
ಕೋಳಿ ಅಂಕ, ಕುದುರೆ ಓಟ, ಕಂಬಳ ನಿರಾತಂಕ ವಾಗಿ ನಡೆಯುತ್ತಿದ್ದರೆ, ಕ್ರೀಡೆ, ಸಾಂಸ್ಕೃತಿಕ ರಂಗ, ಶಿಕ್ಷಣ ಸಂಸ್ಥೆಗಳು ತೆರೆಯುತ್ತಿದ್ದರೆ , ಕೋವಿಡ್ ತನ್ನಿಂದ ತಾನಾಗಿ ಓಡಿಹೋಗುತ್ತದೆ ಎಂದು ಹೇಳಿದ ಅವರು ಶಿಕ್ಷಣ ಸಂಸ್ಥೆಗಳು ಇನ್ನೂ ತೆರೆಯದ ಆತಂಕದಲ್ಲಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ವಸ್ತು ಪ್ರದರ್ಶನ ಮತ್ತು ಮಳಿಗೆ ಉದ್ಘಾಟನೆ ನಡೆಸಿ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ್ದ
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮೋಹನದಾಸ ಕೊಟ್ಟಾರಿ ಅವರ ಮಹತ್ವಾಕಾಂಕ್ಷೆಯ ಯೋಜನೆ, ಕನಸುಗಳು ಈ ಕಲಾ ವೇದಿಕೆ ಯ ಮೂಲಕ ಸಾಧ್ಯವಾಗಿದೆ .
ಕರಾವಳಿ ಭಾಗದ ಪ್ರತಿಯೊಬ್ಬರಲ್ಲೂ ವಿಶೇಷ ವಾದ ಪ್ರತಿಭೆಗಳು ಅಡಗಿದೆ.
ಕಲಾವಿದನಾಗಿ ಕಲೆಯ ಆರಾಧಕನಾಗಿ ಕಲೆಯ ನಾಡು ಆಗಿರುವ ಜಿಲ್ಲೆಯ ಪ್ರತಿಯೊಂದು ಕಲೆಯನ್ನು ಉಳಿಸಿ ಬೆಳಸಲು ಪ್ರಯತ್ನಿಸಿದ್ದೇನೆ.
ರಚನಾತ್ಮಕ ಚಟುವಟಿಕೆಗಳನ್ನು ಯುವಕರ ಮನಸ್ಸಿಗೆ ಮೂಡಿಸಿ ಸದೃಡ ಭಾರತ ನಿರ್ಮಾಣದಲ್ಲಿ ಕೈಜೋಡಿಸಿ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಂಬಳ ಕ್ರೀಡೆ ಗೆ ಹೊಸ ಆವಿಷ್ಕಾರ, ಆಯಾಮ ನೀಡಿದ ಹೆಗ್ಗಳಿಕೆ ಗೆ ನಾವು ಆಯೋಜನೆ ಮಾಡುತ್ತಿದ್ದ ಕಾವಳಮೂಡೂರು ಕಂಬಳ ಎಂದು ಹೆಮ್ಮೆಯಿಂದ ಹೇಳತ್ತೇನೆ ಎಂದು ಅವರು ಹೇಳಿದರು.
ಪುರಸಭಾ ಸದಸ್ಯೆ ಶೋಭಾವತಿ ಕಾಮಾಜೆ, ಉದ್ಯಮಿ ಜಗನ್ನಾಥ ಚೌಟ, ಕೃಷಿ ಉತ್ಸವ ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು, ಗೌರವ ಅಧ್ಯಕ್ಷ ಜಯರಾಮ ರೈ, ಉದ್ಯಮಿ ಚಂದ್ರಹಾಸ ಶೆಟ್ಟಿ ರಂಗೋಲಿ,
ಚಿಣ್ಣರ ಅಧ್ಯಕ್ಷ ರಾದ ಕು| ಭಾಗ್ಯಶ್ರೀ ಬಿ.ಕೆ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ತೋನ್ಸೆ ವಿಜಯಕುಮಾರ್ ಶೆಟ್ಟಿ ಕಲಾಜಗತ್ತು ಮುಂಬಾಯಿ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಮತ್ತು ಸಂಗೀತ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಕು! ದಿಯಾ ರಾವ್ ಕುಂಬ್ಳೆ ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ದಲ್ಲಿ ಚಿಣ್ಣರಲೋಕ ಸೇವಾ ಸಂಸ್ಥೆ ಯ “ಐಸಿರಿ” ಕನ್ನಡ ತುಳು ಆಲ್ಬಮ್ ಗೀತೆಯನ್ನು ಡಾ|ಮೋಹನ್ ಆಳ್ವ ಬಿಡುಗಡೆ ಮಾಡಿದರು.
ಚೆಂಡೆ ಬಳಗದ ಕಲಾವಿದರ ವತಿಯಿಂದ
ಕ್ಯಾನ್ಸರ್ ಚಿಕಿತ್ಸೆಗಾಗಿ ಕುಂದಾಪುರ ದ ನಿಹಾರಿಕೆ ಮಗುವಿಗೆ ಧನಸಹಾಯ ನೀಡಲಾಯಿತು.
ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ, ಪ್ರಸ್ತಾವಿಕವಾಗಿ ಮಾತನಾಡಿದರು.
ಗೌರವ ಸಲಹೆಗಾರ ಸರಪಾಡಿ ಅಶೋಕ್ ಶೆಟ್ಟಿ ಸ್ವಾಗತಿಸಿ, ಲೋಕೇಶ್ ಸುವರ್ಣ ವಂದಿಸಿದರು.