Thursday, October 19, 2023

ಗ್ಯಾಸ್ ಟ್ಯಾಂಕರ್ ಕಂಟೈನರ್ ಲಾರಿಗೆ ಡಿಕ್ಕಿ

Must read

ಬಂಟ್ವಾಳ: ಗ್ಯಾಸ್ ಟ್ಯಾಂಕರ್ ವೊಂದು ಕಲ್ಲಡ್ಕದಲ್ಲಿ ಕಂಟೈನರ್
ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗ್ಯಾಸ್ ಟ್ಯಾಂಕರ್ ನ ವೀಲ್ ತುಂಡಾಗಿ ರಸ್ತೆ ಮಧ್ಯದಲ್ಲಿ ಬಾಕಿಯಾಗಿ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು.


ಘಟನೆಯಲ್ಲಿ ಗ್ಯಾಸ್ ಟ್ಯಾಂಕರ್ ಚಾಲಕನಿಗೆ ಅಲ್ಪಸ್ವಲ್ಪ ಗಾಯವುಂಟಾಗಿದೆ.

ಬೆಂಗಳೂರು ಕಡೆಯಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ರಸ್ತೆಯ ಮಧ್ಯದಲ್ಲಿ ವೀಲ್ ತುಂಡಾಗಿ ನಿಂತ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿತ್ತು.
ಅಪಘಾತದಲ್ಲಿ ಕಂಟೈನರ್ ಲಾರಿಯ ಡೀಸಲ್ ಟ್ಯಾಂಕ್ ಹೊಡೆದು ಸಾವಿರಾರು ರೂ ನಷ್ಟ ಸಂಭವಿಸಿದೆ.
ಗ್ಯಾಸ್ ಟ್ಯಾಂಕರ್ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದೆ.
ಅಪಘಾತ ನಡೆಯುವ ಸಂದರ್ಭದಲ್ಲಿ ಎರಡು ಬೈಕ್ ಮತ್ತು ಒಂದು ಕಾರು ಸ್ವಲ್ಪ ದರದಲ್ಲೇ ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ನನ್ನು ನೋಡಿದ ಬೈಕ್ ಸವಾರರು ಮತ್ತು ಕಾರು ಚಾಲಕ ರಸ್ತೆಯಿಂದ ಬದಿಗೆ ಸರಿಸಿ ಚರಂಡಿಗಿಳಿದು ಹೋದದರಿಂದ ಪ್ರಾಣಾಪಯದಿಂದ ಪಾರಾಗಿದ್ದರು ಎನ್ನಲಾಗಿದೆ.
ಆದರೆ ಅ ಬಳಿಕ ಎದುರಿನಿಂದ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿಯಾಗಿ ಲಾರಿ ರಸ್ತೆ ಮಧ್ಯೆ ನಿಂತಿತ್ತು.
ಈ ಘಟನೆಯಿಂದ ಸಂಚಾರಕ್ಕೆ ಅಡಚಣೆ ಯಾಗಿದ್ದು ಬಂಟ್ವಾಳ ಟ್ರಾಫಿಕ್ ಎಸ್.ಐ .ರಾಜೇಶ್ ಕೆವಿ. ಅವರು ಲಾರಿಯನ್ನು ಕ್ರೇನ್ ನ ಸಹಾಯ ಪಡೆದು ರಸ್ತೆಯ ಮಧ್ಯ ದಿಂದ ಬದಿಗೆ ಸರಿಸುವ ಕಾರ್ಯಚರಣೆ ಮಾಡಿಸಿದ ಬಳಿಕ ಸಂಚಾರಕ್ಕೆ ಅವಕಾಶ ಉಂಟಾಯಿತು.

ದುರಂತ ನಡೆಯುವ ಮೊದಲು ಎಚ್ಚೆತ್ತುಕೊಳ್ಳಿ

ಗ್ಯಾಸ್ ಟ್ಯಾಂಕರ್ ಚಾಲಕರ ಅಜಾಗರೂಕತೆಯ ಹಾಗೂ ಅತೀವೇಗದ ಚಾಲನೆ ಮತ್ತೋಂದು ಪೆರ್ನೆ ದುರಂತಕ್ಕೆ ಕಾರಣವಾಗದಿರಲಿ….
ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡ ಪೆರ್ನೆ ದುರಂತ ಜನರ ಮನಸ್ಸಿನಲ್ಲಿ ಮಾಸುವ ಮೊದಲೇ ಇಂತಹ ಅವಘಡಗಳು ಮರುಕಳಿಸದಿರಲಿ ಎಂಬ ಅತಂಕದಲ್ಲಿರುವಾಗಲೇ ಚಾಲಕರ ಅಜಾಗರೂಕತೆ ಜನರನ್ನು ರೊಚ್ಚಿಗೆಬ್ಬಿಸುವಂತೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಟ್ಯಾಂಕರ್ ಗಳ ಅವಘಡ ಗಳು ಜಾಸ್ತಿಯಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ.
ಪೆರ್ನೆ ದುರಂತದ ಬಳಿಕ ರಾತ್ರಿ ಈ ವಾಹನಗಳು ಸಂಚಾರ ಮಾಡದಂತೆ ಜಿಲ್ಲಾಧಿಕಾರಿಗಳು ಅದೇಶ ಮಾಡಿದ್ದರು.
ಪ್ರಸ್ತುತ ಆದೇಶ ಗಾಳಿಗೆ ತೂರಲಾಗಿದೆ.

More articles

Latest article