Saturday, April 6, 2024

ಕಳ್ಳತನ ನಡೆಸುತ್ತಿದ್ದ ನಟೋರಿಯಸ್ ಗ್ಯಾಂಗ್ ನ ಬಂಧಿಸಿದ ಬಂಟ್ವಾಳ ಪೋಲೀಸರು!

ಬಂಟ್ವಾಳ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸರಣಿ ಕಳ್ಳತನಗಳನ್ನು ನಡೆಸುತ್ತಿದ್ದ ನಟೋರಿಯಸ್ ಗ್ಯಾಂಗ್ ಪತ್ತೆ ಹಚ್ಚುವಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್  ಅವರ ವಿಶೇಷ ತಂಡ ಯಶಸ್ವಿಯಾಗಿದೆ.

ಎಸ್ ಐ ಅವಿನಾಶ ನೇತೃತ್ವದ ತಂಡ ಬಂಟ್ವಾಳ ಸುರಭಿ ಬಾರ್ ಕಳ್ಳತನದ ಆರೋಪಿಗಳಾದ
ಮಂಗಳೂರು ಅರ್ಕುಳ ಗ್ರಾಮ ದ ವಲಚಿಳು ಪದವು ನಿವಾಸಿ ಅಮ್ಮೀ ಯಾನೆ ಅಮರುದ್ದಿನ್ ,ಮಂಗಳೂರು ಕನ್ನೋರು ಗ್ರಾಮದಕುಳ್ನಾಡ್ ಶಾಲೆಯ ಹತ್ತಿರ ನಿವಾಸಿ ಮಹಮದ್ ಯೂನಸ್ಮತ್ತು ಮಂಗಳೂರು ಅಡ್ಯಾರ್ ಗ್ರಾಮ ಕಣ್ಣೂರು ಸಾಲಾಪಿ ಮಸೀದಿ ಹತ್ತಿರ ನಿವಾಸಿಹಫೀಸ್ ಯಾನೆ ಅಪ್ಪಿ ಇವರುಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಬಂಧಿತರ ಕೈಯಿಂದ ಒಟ್ಟು 480000 ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ
ಒಂದು ಅವೆಂಜಾರ್ ಬೈಕ್ ,ಒಂದು ಮೊಬೈಲ್, ಒಂದು ಡಿ.ವಿ.ಆರ್.ಸೆಟ್ ಬಾಕ್ಸ್ ಮತ್ತು ಅಂದಾಜು 35000 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ
ವಿಟ್ಲ ಎಸ್ ಐ ವಿನೋದ್ ರೆಡ್ಡಿ ನೇತೃತ್ವದ ತಂಡದಿಂದ ಸಜಿಪಮೂಡ ಗ್ರಾಮದ ಪೆರ್ವಾ ನಿವಾಸಿ ಫಾರೂಕ್ ಯಾನೆ ಉಮ್ಮರ್ ಫಾರೂಕ್ ಯಾನೆ ಕಳ್ಳ ಫಾರೂಕ್ (೨೭), ಮಂಗಳೂರು ಬೆಂಗ್ರೇ ನಿವಾಸಿ ಮಹಮ್ಮದ್ ಸಫ್ವಾನ್ ಯಾನೆ ಸರತ್ ಯಾನೆ ಕರೂ ಯಾನೆ ಸರೂ ಯಾನೆ ಸಫ್ವಾನ್ (೧೯) ಬಂಧಿತ ಆರೋಪಿಗಳಾಗಿದ್ದಾರೆ. ಇವರುಗಳಿಂದ ೧೪ ಜೀವಂತ ಗುಂಡು, ೨ ಬೈಕ್, ೩ ಡಿವಿಆರ್, ಮಾನಿಟರ್, ಬ್ರಾಂಡ್ ಬ್ಯಾಂಡ್ ಒ ಎಲ್ ಟಿ ಬಾಕ್ಸ್ ಪತ್ತೆ ಹಚ್ಚುವ ಮೂಲಕ ಒಂಬತ್ತು ಕಳವು ಪ್ರಕರಣಗಳನ್ನು ಬೇಧಿಸಿದ್ದಾರೆ.

ಫಾರೂಕ್ ಹಾಗೂ ಸಫ್ವಾನ್ ಅಡ್ಯಾರು ಕಣ್ಣೂರು ನಿವಾಸಿ ಅಪ್ಪಿ ಯಾನೆ ರಫೀಜ್ ಯಾನೆ ಹಪೀಜ್ (೨೦) ಜತೆಗೆ ಸೇರಿಕೊಂಡು ವಿಟ್ಲದಲ್ಲಿ ಜ.೨೫ರಂದು ಮಾಣಿ ಬಾರ್, ನೇರಳಕಟ್ಟೆಯ ಸಣ್ಣ ಜ್ಯುವೆಲ್ಲರಿಯಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿ ಉರಿಮಜಲು ಕೆ. ಎಸ್. ಮೋಹನ್ ಅವರಿಗೆ ಸೇರಿದ ಲಕ್ಷ್ಮೀ ಪ್ಯುಯಲ್ ಪೆಟ್ರೋಲ್ ಬಂಕ್ ಶಟರ್ ಮುರಿದು ಇಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಹಾಗೂ ಸಜೀವ ಗುಂಡುಗಳನ್ನು ಕಳವುಗೈದಿದ್ದರು.

ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಸಜಿಪಮೂಡಾ ಗ್ರಾಮದ ಕೊಳ್ಳಕ್ಕೆ ನಡಿಗುತ್ತು ಬಸ್ಸುತಂಗುದಾಣದ ಬಳಿ ಮುಡಿಪ್ಪು ಕಡೆಯಿಂದ ಬೈಕ್ ನಲ್ಲಿ ಆಗಮಿಸುತ್ತಿದ್ದವರನ್ನು ವಿಚಾರಿಸಿ ತಪಾಸಣೆ ನಡೆಸಿದಾಗ ಸಫ್ವಾನ್ ಪ್ಯಾಂಟ್ ಕಿಸೆಯಲ್ಲಿ ಜೀವಂತ ಬುಲೆಟ್ ತುಂಬಿದ ಬಾಕ್ಸ್ ಪತ್ತೆಯಾದ ಹಿನ್ನಲೆಯಲ್ಲಿ ಕೂಲಂಕುಷ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ನಡೆಸಿದ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

ಈ ಮೇಲ್ಕಾಣಿಸಿದ ಎಲ್ಲ ಆರೋಪಿಗಳುಮಂಗಳೂರು ಗ್ರಾಮಾಂತರ, ಬಂಟ್ವಾಳ ಗ್ರಾಮಾಂತರ ಭಾಗದ ತಲಾ ಒಂದು ಡಿವಿಆರ್, ವಿಟ್ಲದ ಜೀವಂತ ಗುಂಡು, ಡಿವಿಆರ್, ಮಾನಿಟರ್, ಬ್ರಾಂಡ್ ಬ್ಯಾಂಡ್ ಒ ಎಲ್ ಟಿ ಬಾಕ್ಸ್, ಮಂಗಳೂರು ಗ್ರಾಮಾಂತರ, ಮಂಜೇಶ್ವರದ ತಲಾ ಒಂದು ಬೈಕ್ ತನಿಖೆಯಿಂದ ಪತ್ತೆಯಾಗಿದೆ.

ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ಬಂಟ್ವಾಳ ಟೌನ್ ಎಸ್ ಐ ಅವಿನಾಶ್, ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ,ಈರಯ್ಯ ಸಿಬ್ಬಂದಿಗಳಾದ ಜಯಕುಮಾರ, ಪ್ರಸನ್ನ, ಜಯರಾಮ, ಲೋಕೇಶ, ಪ್ರತಾಪ, ವಿನಾಯಕ, ಹೇಮರಾಜ, ಪ್ರವೀಣ್, ಕುಮಾರ್, ವಿವೇಕ್, ಗೋಣಿ ಬಸಪ್ಪ, ಕಂಪ್ಯೂಟರ್ ವಿಭಾಗದ ದಿವಾಕರ, ಸಂಪತ್ , ಡಿಸಿಐಬಿ ಮತ್ತು ಠಾಣಾ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.

ಬಂಟ್ವಾಳದಲ್ಲಿ ವಿಶೇಷ ಸಭೆ:
ಬಂಟ್ವಾಳ, ವಿಟ್ಲ, ಉಪ್ಪಿನಂಗಡಿ, ಪುತ್ತೂರು ಭಾಗದಲ್ಲಿ ಸರಣಿ ಕಳ್ಳತನಗಳು ಹೆಚ್ಚಿದ ಹಿನ್ನಲೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ಅವರು ವಿಶೇಷ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಠಾಣೆಗಳ ಉಪನಿರೀಕ್ಷಕರಾದ ಅವಿನಾಶ್, ಪ್ರಸನ್ನ, ವಿನೋದ್ ರೆಡ್ಡಿ, ಸಂಜೀವ್, ಕಲೈಮಾರ್, ಈರಯ್ಯ ಅವರ ವಿಶೇಷ ತಂಡವನ್ನು ರಚಿಸಿ ಸರಣಿ ಕಳ್ಳತನಕ್ಕೆ ಕಾರಣವಾದವರ ಬಂಧನಕ್ಕೆ ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡಿದ್ದರು.

ಹಲವು ಪ್ರಕರಣದ ಆರೋಪಿ:
ಫಾರೂಕ್ ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯಾಗಿದ್ದು, ಬಂಟ್ವಾಳ ಗ್ರಾಮಾಂತರದಲ್ಲಿ ೪, ಬಂಟ್ವಾಳ ನಗರದಲ್ಲಿ ೪, ಉಪ್ಪಿನಗಂಡಿಯಲ್ಲಿ ೧, ವಿಟ್ಲದಲ್ಲಿ ೧ ಪ್ರಕರಣವಿದ್ದು, ಕಡಬ, ಕೊಜಾಣೆ, ಬಂಟ್ವಾಳ ಗ್ರಾಮಾಂತರ, ಉಳ್ಳಾಲ, ಮಂಗಳೂರು ಗ್ರಾಮಾಂತರ, ಬಜ್ಪೆ ಠಾಣೆ ಸೇರಿ ಈತನ ಮೇಲೆ ಸುಮಾರು ೩೧ ಪ್ರಕರಣವಿದೆ. ಸಫ್ವಾನ್ ಮೇಲೆ ಪಣಂಬೂರು, ಬಂದರು, ವಿಟ್ಲದಲ್ಲಿ ತಲಾ ಒಂದು ಪ್ರಕರಣ ಸೇರಿ ಈತನ ಮೇಲೆ ಒಟ್ಟು ೮ ಪ್ರಕರಣಗಳಿದೆ. ಮತ್ತು ಹಫೀಸ್ ಯಾನೆ ಅಪ್ಪಿ ಮೇಲೆ ವಿವಿಧ ಠಾಣೆಯಲ್ಲಿ ಒಟ್ಟು 6 ಕೇಸ್ ಗಳಿವೆ.

ಈ  ತಂಡಗಳು ವೃತ್ತ ವ್ಯಾಪ್ತಿಯ ಮತ್ತು ಇನ್ನಿತರ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 13 ಪ್ರಕರಣಗಳನ್ನು ಬೇದಿಸುವಲ್ಲಿ ಯಾಶಸ್ವಿ ಆಗಿದ್ದಾರೆ,
ಪ್ರಕರಣಗಳ ವಿವರ:
1. ಬಂಟ್ವಾಳ ನಗರ ಪೊಲೀಸ್ ಠಾಣೆ ಆ. ಕ್ರ.6/2021 ಸುರಭಿ ಬಾರ್ ಕಳ್ಳತನ
2. ಬಂಟ್ವಾಳ ನಗರ ಪೊಲೀಸ್ ಠಾಣೆ ಆ. ಕ್ರ 30/2020 ನರಿಕೊಂಬು ದೇವಸ್ಥಾನ ಹುಂಡಿ ಕಳವು
3.ಬಂಟ್ವಾಳ ನಗರ ಪೊಲೀಸ್ ಠಾಣೆ 36/2020 ಮೆಲ್ಕಾರ್ ಕಾಲೇಜ್ ಕಳ್ಳತನ
4. ವಿಟ್ಲ ಪೊಲೀಸ್ ಠಾಣೆ ಆ. ಕ್ರ 112/2021 ಉರಿಮಜಲು ಇ.ಆರ್.ಎಸ್.ಎಸ್. ಪೆಟ್ರೋಲ್ ಬಂಕ್ ಕಳ್ಳತನ ಪ್ರಕರಣ
5.ಬಂಟ್ವಾಳ ನಗರ ಪೊಲೀಸ್ ಠಾಣೆ ಆ ಕ್ರ್ 47/2020 ಅಮ್ಟೂರು ಚರ್ಚ್ ಕಳ್ಳತನ
6.ಬಂಟ್ವಾಳ ನಗರ ಪೊಲೀಸ್ ಠಾಣೆ 5/2021 ಚಂಡಿಕಾ ಪರಮೇಶ್ವರಿ ದೇವಸ್ಥಾನ ಹುಂಡಿ ಕಳ್ಳತನ
7.ಬಂಟ್ವಾಳ ಗ್ರಾಮಾಂತರ  ಪೊಲೀಸ್ ಠಾಣೆ ಆ ಕ್ರಾ  1/2020 ಸ್ಕೂಲ್ ಕಳ್ಳತನ
8.ಬಂಟ್ವಾಳ ಗ್ರಾಮಾಂತರ  ಪೊಲೀಸ್ ಠಾಣೆ ಆ ಕ್ರಾ  26/20 ಶಂಭೂರು ಸ್ಕೂಲ್ ಕಳ್ಳತನ
9.ಬಂಟ್ವಾಳ ಗ್ರಾಮಾಂತರ  ಪೊಲೀಸ್ ಠಾಣೆ ಆ ಕ್ರಾ 16/2021 ಪರ್ಲ ಚರ್ಚ್ ಕಳ್ಳತನ
10..ಬಂಟ್ವಾಳ ಗ್ರಾಮಾಂತರ  ಪೊಲೀಸ್ ಠಾಣೆ ಆ ಕ್ರಾ 17/2021 ರಾಜೇಶ್ ಬಾರ್ ಕಳ್ಳತನ
11. ಮಂಗಳೂರು ಗ್ರಾಮಾಂತರ  ಪೊಲೀಸ್ ಠಾಣೆ ಆ ಕ್ರಾ 5/2021 ಪಲ್ಸರ್ ಬೈಕ್ ಕಳ್ಳತನ
12.. ಉಪ್ಪಿನಂಗಡಿ ಪೊಲೀಸ್ ಠಾಣೆ ಆ ಕ್ರಾ 119/2020 ಉಲ್ಲಾಸ್ ಬಾರ್ ಕಳ್ಳತನ
13. ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿ ಅಲ್ಲಿ ಪಲ್ಸರ್ ಬೈಕ್ ಕಳ್ಳತನ

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...