Sunday, April 14, 2024

“ದೈವ ನಡೆ ” ಪುಸ್ತಕ ಬಿಡುಗಡೆ

ಬೆಳ್ತಂಗಡಿ : ಖ್ಯಾತ ಜ್ಯೋತಿಷಿ, ಬೆಳ್ತಂಗಡಿ ಚರ್ಚ್ ಶಾಲೆಯ ಶಿಕ್ಷಕರಾದ, ಆಸ್ರಣ್ಣರಾದ ಮಂಜುನಾಥ ಭಟ್ ಅಂತರ ಅವರು ರಚಿಸಿದ ದೈವ  ನಡೆ ನಂಬಿಕೆ ನಡವಳಿಕೆ ಪುಸ್ತಕ ಅಳದಂಗಡಿಯ ಅಜಿಲ ಅರಮನೆಯಲ್ಲಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಬಿಡುಗಡೆಗೊಳಿಸಿದರು.

ಪುಸ್ತಕ ಅನಾವರಣಗೊಳಿಸಿ ಮಾತನಾಡಿದ ಅವರು ತುಳುನಾಡಿನಲ್ಲಿ ದೈವ ಆರಾಧನೆಯನ್ನು ಮಾಡುವ ಬಗ್ಗೆ ಪುಸ್ತಕ ಬೆಳಕು ಚೆಲ್ಲುತ್ತಿದೆ. ದೈವಾರಾಧನೆ  ಹೇಗೆ ಮಾಡಬೇಕು, ರೀತಿ ರಿವಾಜುಗಳ ಬಗ್ಗೆ ತಿಳಿಸಲಾಗಿದೆ. ಸಂಪ್ರದಾಯ ಹಾಗೂ ಕಟ್ಟುಪಾಡುಗಳನ್ನು ಮರೆಯುತ್ತಿರುವ  ಹೊತ್ತಿನಲ್ಲಿ ಈ ಪುಸ್ತಕ ನಮ್ಮ ಸಂಸ್ಕೃತಿಯನ್ನು ಮನನ ಮಾಡುವಂತೆ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಲೇಖಕರಾದ ಮಂಜುನಾಥ ಭಟ್ ಅಂತರ ಹಾಗೂ ಮಂಜುವಾಣಿ ಉಪಸಂಪಾದಕ ಚಂದ್ರಶೇಖರ ಅಂತರ ಉಪಸ್ಥಿತರಿದ್ದರು.

ಸಂಜೀವ ಶ್ರೀ ಅನುಗ್ರಹ ಪಾರೆಂಕಿ ಸ್ವಾಗತಿಸಿದರು, ಅಳದಂಗಡಿ ಅರಮನೆಯ ಚಾವಡಿ ನಾಯಕರಾದ ರಾಜಶೇಖರ ಶೆಟ್ಟಿ ವಂದಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶುಭ ಕೋರಿದ್ದು, ಧರ್ಮಸ್ಥಳದ ಸಂಸ್ಕೃತಿ ಮತ್ತು ಸಂಶೋಧನ ಪ್ರತಿಷ್ಠಾನದ ಡಾ. ಎಸ್. ಆರ್. ವಿಘ್ನರಾಜ ಧರ್ಮಸ್ಥಳ ಮುನ್ನುಡಿ ಬರೆದಿದ್ದಾರೆ.

ಯತೀಶ್ ನಿಡಿಗಲ್ ಅವರು ವಿನ್ಯಾಸ ಮಾಡಿದ್ದಾರೆ. ಉಜಿರೆಯ ಮಂಜುಶ್ರೀ ಮುದ್ರಣಾಲಯದಲ್ಲಿ ಪುಸ್ತಕ ಅಚ್ಚಾಗಿದೆ. ಬೆಲೆ 50 ರೂ ಹೊಂದಿದೆ.

More from the blog

ಮತದಾರರ ಜಾಗೃತಿ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ ಹಾಗೂ ಬೀದಿನಾಟಕ

ತಾಲೂಕು ಪಂಚಾಯತ್‌ ಬಂಟ್ವಾಳ, ತಾಲೂಕು ಸ್ವೀಪ್‌ ಸಮಿತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಮತದಾರರ ಸಾಕ್ಷರತಾ...

ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಖಂಡನೀಯ-ಜಗದೀಶ್ ಕೊಯಿಲ

ಬಂಟ್ವಾಳ: ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಮಾಡಿದ್ದು ಖಂಡನೀಯ ಎಂದು ಜಗದೀಶ್ ಕೊಯಿಲ ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ...

ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್ : ಮೂವರಿಗೆ ಗಾಯ

ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ‌.ಸಿ.ಬಸ್ ಗೆ ಹೆಲ್ಮೆಟ್ ಧರಿಸಿದೆ...

ಮನೆ ಮನೆಗೆ ತೆರಳಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಮತಯಾಚನೆ

ನಮ್ಮ ಬೂತ್ ನಮ್ಮ ಹೊಣೆ ಘೋಷನೇಯಂತೆ ಬೂತ್ ಸಂಖ್ಯೆ 126 ವಾರ್ಡ್ 12 ರ ಅಜ್ಜೀಬೆಟ್ಟು ನಲ್ಲಿ ಮನೆ ಮನೆಗೆ ತೆರಲಿ ಲೋಕ ಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಪರವಾಗಿ ಮತ ಯಾಚನೆ...