Thursday, October 26, 2023

ಕೇಂದ್ರ ಬಜೆಟ್: ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ?

Must read

ನವದೆಹಲಿ: ಮಹಾಮಾರಿ ಕರೊನಾ ವೈರಸ್​ನಿಂದ ಹಳಿತಪ್ಪಿರುವ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಚೇತರಿಕೆ ಬಜೆಟ್ ಮಂಡಿಸಿದ್ದಾರೆ. ಕರೊನಾದಿಂದ ಬಜೆಟ್‍ನಲ್ಲಿ ಆರೋಗ್ಯ, ರಕ್ಷಣೆ, ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಎರಡು ರಾಷ್ಟ್ರೀಕೃತ ಬ್ಯಾಂಕುಗಳ ಬಂಡವಾಳ ಹಿಂತೆಗೆತ ಹಾಗೂ ಚುನಾವಣೆ ನಡೆಯುವ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಕಸ್ಟಮ್ಸ್ ಶುಲ್ಕ ಕಡಿತದಿಂದ ಚಿನ್ನ, ಬೆಳ್ಳಿ ಅಗ್ಗವಾಗಲಿದೆ. ವಿದೇಶಿ ಮೊಬೈಲ್‌, ಚಾರ್ಜರ್, ವಿದೇಶಿ ಟಿವಿ, ಫ್ರಿಜ್ಜ್ ಮತ್ತಷ್ಟು ದುಬಾರಿಯಾಗಲಿದೆ. ಸ್ವದೇಶಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿದೆ.

ಎಲೆಕ್ಟ್ರಾನಿಕ್ ಉತ್ಪನ್ನಗಳ ಅಬಕಾರಿ ಸುಂಕ, ಆಟೋ ಮೊಬೈಲ್‌ ಉತ್ಪನ್ನಗಳ ಸುಂಕ, ಪ್ಲಾಸ್ಟಿಕ್ ಉತ್ಪನ್ನಗಳ ಮೇಲಿನ ಸುಂಕ, ರೆಡಿಮೇಡ್ ವಸ್ತುಗಳ ಮೇಲಿನ ಆಮದು ಸುಂಕ, ವಿದೇಶಿ ಬಟ್ಟೆಗಳ ಆಮದು ಸುಂಕ ಮತ್ತು ಕಚ್ಚಾ ರೇಷ್ಮೆ ಕಸ್ಟಮ್ಸ್ ಸುಂಕವನ್ನು ಹೆಚ್ಚಳ ಮಾಡಲಾಗಿದೆ.

ಚಿನ್ನದ ಮೇಲಿನ ಕಸ್ಟಮ್ಸ್‌ ಸುಂಕ ಹಿಂದಿನ ದರಕ್ಕೆ ಇಳಿಕೆ ಮಾಡಲಾಗಿದ್ದು, ಚಿನ್ನ ಬೆಳ್ಳಿ ದರದಲ್ಲಿ ಕಡಿತವಾಗಲಿದೆ. ಎಂಎಸ್​ಎಂಇ ಉತ್ಪನ್ನಗಳ ಮೇಲಿನ ಸುಂಕವನ್ನು ಇಳಿಕೆ ಮಾಡಲಾಗಿದ್ದು, ಆರ್ಥಿಕ ಚೇತರಿಕೆ ದೃಷ್ಟಿಯಿಂದ ಬಜೆಟ್​ ಮಂಡನೆ ಮಾಡಲಾಗಿದೆ. ಬಜೆಟ್​ ಬಳಿಕ ಜನಸಾಮಾನ್ಯರಿಗೆ ಯಾವುದು ಅಗ್ಗ ಮತ್ತು ಯಾವುದು ದುಬಾರಿಯಾಗಲಿದೆ ಎಂಬ ಪಟ್ಟಿ ಈ ಕೆಳಕಂಡಂತಿದೆ.

ಅಗ್ಗ

  • ಕಬ್ಬಿಣ
  • ಉಕ್ಕು
  • ನೈಲಾನ್​ ಬಟ್ಟೆಗಳು
  • ಇನ್ಸೂರೆನ್ಸ್​
  • ಶೂ
  • ಚಿನ್ನ, ಬೆಳ್ಳಿ

ದುಬಾರಿ

  • ಪೆಟ್ರೋಲ್​
  • ಡೀಸೆಲ್​
  • ಎಲೆಕ್ಟ್ರಾನಿಕ್ಸ್​ ವಸ್ತುಗಳು
  • ಮೊಬೈಲ್​ ಫೋನ್​ಗಳು
  • ಚಾರ್ಜರ್ಸ್​
  • ಜೆಮ್ಸ್​ (ಹರಳುಗಳು)
  • ವಿದೇಶದಿಂದ ಬರುವ ವಾಹನ ಬಿಡಿಭಾಗಗಳು
  • ಚರ್ಮ ಉತ್ಪನ್ನಗಳು
  • ವಿದೇಶದಿಂದ ಆಮದಾಗುವ ವಸ್ತುಗಳು
  • ಕೃಷಿ ಉತ್ಪನ್ನಗಳು
  • ಪ್ಲಾಸ್ಟಿಕ್​
  • ಮದ್ಯ

More articles

Latest article