ವಿಟ್ಲ: ತೀಯಾ ಸಮಾಜದ ಇತಿಹಾಸ ಪ್ರಸಿದ್ದ 18 ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದ ಭಂಡಾರ ಕ್ಷೇತ್ರದ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ತಂತ್ರಿವರ್ಯರಾದ ಉಳಿಯತ್ತಾಯ ವಿಷ್ಣು ಆಸ್ರ ಅವರ ಮಾರ್ಗದರ್ಶನದಲ್ಲಿ ಬುಧವಾರ ನಡೆಯಿತು.
ಕ್ಷೇತ್ರದ ಶಿಲ್ಪಿವರ್ಯರಾದ ರಮೇಶ್ ಕಾರಂತ ಬೆದ್ರಡ್ಕ ನೇತೃತ್ವದಲ್ಲಿ ಕ್ಷೇತ್ರ ನಿರ್ಮಾಣದ ರೂವಾರಿ ಕೃಷ್ಣ ಎನ್. ಉಚ್ಚಿಲ ಅವರು ಶಿಲಾನ್ಯಾಸ ನಡೆಸಿದರು. ಕೊಡಿಮರ ಮೆರವಣಿಗೆ ಸಂದರ್ಭ ಅಗತ್ಯ ವ್ಯವಸ್ಥೆಗಳನ್ನು ಮಾಡಿದ ವಿಟ್ಲ ಉಪ ವಲಯ ಅರಣ್ಯಾಧಿಕಾರಿ ಸೀತಾರಾಮ ಕೆ., ವಿಟ್ಲ ಠಾಣಾಧಿಕಾರಿ ವಿನೋದ್ ರೆಡ್ಡಿ, ವಿವಿಧ ಸಂಘಟನೆಯ ಮುಖಂಡರು, ಸಹಕರಿಸಿದ ಗಣ್ಯರನ್ನು ಗೌರವಿಸಲಾಯಿತು.
ಅಳಿಕೆ ಶ್ರೀಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್, ಮುಂಬಯಿ ತೀಯಾ ಸಮಾಜದ ಅಧ್ಯಕ್ಷರಾದ ರವಿ ಮಂಜೇಶ್ವರ, ಕಣ್ಣಕಲೆಕಾರ ಗೋಪಾಲದಾಸ್ ಕಲೆಕಾರ್, ಉಪ್ಪಳ ಕ್ಷೇತ್ರದ ಆಚಾರ ಪಟ್ಟವರು ಮತ್ತು ಗುರಿಕಾರರು, ಸೇವಾ ಸಮಿತಿಯ, ನಿರ್ಮಾಣ ಸಮಿತಿಯ, ಯುವಜನ ಸಂಘ, ಮಹಿಳಾ ಸಂಘ, ಭಜನಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಕಣಿಲ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.