ಬಂಟ್ವಾಳ : ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಶ್ರೀ ಆದಿಶಕ್ತಿ ಬೊಳ್ಳಿಮಾರು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಆದಿ ಶಕ್ತಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಮತ್ತು ಸಹ ಪರಿವಾರ ದೈವಗಳ ಹಾಗೂ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಫೆ.14ರಿಂದ ಫೆ.16ರವರೆಗೆ ನಡೆಯಲಿದೆ.
ಕ್ಷೇತ್ರದ ಹಿನ್ನೆಲೆ: ಇಲ್ಲಿನ ಧರ್ಮದರ್ಶಿ ವಿಜಯ ಸಾಲ್ಯಾನ್ ಅವರು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಗೋಚರ ಶಕ್ತಿಯ ಆವಾಹನೆಯಾದ ಅನುಭವವನ್ನು ಅವರು ಮರೆತರೂ ಕ್ರಮೇಣ ಮಂತ್ರ ತಂತ್ರಗಳ ಸಾಧಕರಾಗಿ ಕನಸಲ್ಲಿ ಕಂಡಂತೆ ಕಾರಿಂಜದ ಕೆರೆಯಲ್ಲಿ ದೊರೆತ ಕಲ್ಲನ್ನು ಪ್ರತಿಷ್ಠಾಪಿಸಿ ಶ್ರೀ ಕೊರಗಜ್ಜ ಸಾನ್ನಿಧ್ಯ ಉಂಟಾಯಿತು. ಕಾಲಾಂತರದಲ್ಲಿ ದೈವ ಪ್ರೇರಣೆಯಂತೆ ಅಷ್ಟ ಮಂಗಲ ಪ್ರಶ್ನೆ ಪ್ರಕಾರ ಶ್ರೀ ಆದಿಶಕ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಸಹ ಪರಿವಾರ ದೈವಗಳ ಗುಡಿ ನಿರ್ಮಾಣದ ಸಂಕಲ್ಪವಾಗಿ ಇದೀಗ ಪುನರ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವಕ್ಕೆ ಸಜ್ಜು ಗೊಂಡಿದೆ.
ಫೆ.14ರಂದು ಬೆಳಗ್ಗೆ ಹೊರೆ ಕಾಣಿಕೆ ಸಮರ್ಪಣೆ ಮೆರವಣಿಗೆ ನಡೆಯಲಿದೆ. ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ಸಂಜೆ 5ರಿಂದ ಭೂವರಾಹ ಹೋಮ, ವಾಸ್ತು ಹೋಮ ಇತ್ಯಾದಿ ವೈದಿಕ ಕಾರ್ಯಕ್ರಮಗಳು, ಸಂಜೆ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಇವರಿಂದ ಅರ್ಗಂಟ್ ತುಳುನಾಟಕ ಪ್ರದರ್ಶನವಿದೆ.
ಫೆ.15ರಂದು ಬೆಳಗ್ಗೆ ಗಣಹೋಮ, ತೋರಣ ಮುಹೂರ್ತ, ಪೂರ್ವಾಹ್ನ 9.12 ಕ್ಕೆ ಮೀನ ಲಗ್ನದಲ್ಲಿ ದೇವಿಯ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಹೋಮ,ಪಂಚಾಮೃತ ಅಭಿಷೇಕ 108 ಕಲಾಶಾಭಿಷೇಕ, ಮಹಾದುರ್ಗಾ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೈವಗಳ ಸನ್ನಿಽಯಲ್ಲಿ ಸುದರ್ಶನ ಹೋಮ,ವಾಸ್ತು ಹೋಮ, ವಾಸ್ತು ಬಲಿ, ದೈವಗಳ ಬಿಂಬಾವಾಸ, ಕುಣಿತ ಭಜನೆ, ಬೊಳ್ಳಿಮಾರ್ ತುಡರ್ ತುಳು ಭಕ್ತಿ ಗೀತೆಗಳ ವೀಡಿಯೋ ಆಲ್ಬಂ ಬಿಡುಗಡೆ ನಡೆಯಲಿದೆ.ರಾತ್ರಿ ವಿಟ್ಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಫೆ.16 ರಂದು ಗಣಹೋಮ ದೈವಗಗಳಿಗೆ ಕಲಶ ಪೂಜೆ ಹಾಗೂ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಪರ್ವ ಸೇವೆ. ಸಂಜೆ ವಿಜಯ್ ಕುಮಾರ್ ಕೊಡಿಯಾಲ್‌ಬಲ್ ಅವರ ಕಲಾ ಸಂಗಮ ತಂಡದಿಂದ ಶಿವದೂತೆ ಗುಳಿಗೆ ತುಳು ನಾಟಟಕ, ರಾತ್ರಿ 7 ರಿಂದ ಮಂತ್ರದೇವತೆ, ಕಲ್ಲುರ್ಟಿ,ಕೊರತಿ ಹಾಗೂ ಗುಳಿಗ ದೈವಗಳ ನೇಮೋತ್ಸವ. ರಾತ್ರಿ 8 ಗಂಟೆಗೆ ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ಧರ್ಮದರ್ಶಿ ವಿಜಯ ಸಾಲ್ಯಾನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.