ಬಂಟ್ವಾಳ: ಬುಡೋಳಿ ಯೂತ್ ಫೇಡರೇಶನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ವೆನ್ಲಾಕ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನೇರಳಕಟ್ಟೆ ಇಂಡಿಯನ್ ಅಡಿಟೋರಿಯಂ”ನಲ್ಲಿ ನಡೆದ ಮದುವೆ ಸಮಾರಂಭದ ಆದರ್ಶ ರಕ್ತದಾನ ಶಿಬಿರ ಹಾಗೂ BYF ಆಸರೆ 2021 ಬುಲೆಟಿನ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ರಫೀಕ್ ಮಾಸ್ಟರ್ ಸಮಾಜದಲ್ಲಿ ಒಗ್ಗಟ್ಟಾಗಿ ಮುಂದೆ ಸಾಗಿದರೆ ಸ್ಥಾನಮಾನ ಜಾಸ್ತಿಯಾಗಿರುತ್ತದೆ ಬುಡೋಳಿ ಯೂತ್ ಫೇಡರೇಶನ್ ಸಂಸ್ಥೆಯ ಈ ಕಾರ್ಯವು ಅತ್ಯಂತ ಶ್ಲಾಘನೀಯ ಎಂದರು. ಗಡಿಯಾರ ಜುಮ್ಮಾ ಮಸೀದಿ ಯ ಹನೀಫ್ ಮುಸ್ಲಿಯಾರ್ ದುವಾ ನೆರವೇರಿಸಿದರು.



ಈ ಸಂದರ್ಭದಲ್ಲಿ ರಿಯಾಝ್ ಪರಂಗಿಪೇಟೆ, ರಶೀದ್ ವಿಟ್ಲ, ಡಾ ಶಕೀಲ್ ಕೆಪಿಸಿಸಿ ಅಲ್ಪಸಂಖ್ಯಾತ ಉಪಾಧ್ಯಕ್ಷರು, ರಿಯಾಝ್ ಕಲ್ಲಾಜೆ ಅಧ್ಯಕ್ಷರು ಜೆ.ಎಮ್ ಗಡಿಯಾರ, ಅಬ್ದುಲ್ ಮಜೀದ್ ದಾರಿಮೀ, ಸಿದ್ದೀಕ್ ಮಂಜೇಶ್ವರ ಬ್ಲಡ್ ಡೋನರ್ಸ್ ಮಂಗಳೂರು, ಮುಹಮ್ಮದ್ ಅಶ್ರಫ್ ಸತ್ತಿಕಲ್ಲು, ಬಿವೈಎಫ್ ಅಧ್ಯಕ್ಷರಾದ ಅಲ್ತಾಫ್ ಹುಸೈನ್, ಮನ್ಸೂರ್ ಕೋಡಿಜಾಲ್ , ಶಾಕಿರ್ ಹಕ್ ನೆಲ್ಯಾಡಿ, ಸಮೀರ್ ನಾರಾವಿ, ಮತ್ತಿತರರು ಉಪಸ್ಥಿತರಿದ್ದರು. ಬಾಷಿತ್ ಬುಡೋಳಿ ವಂದಿಸಿ, ಸಿದ್ದೀಕ್ ಬೀಟಿಗೆ ಕಾರ್ಯಕ್ರಮ ನಿರೂಪಿಸಿದರು.. ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಉಪಾಧ್ಯಕ್ಷರಾದ ಡಾ ಶಕೀಲ್ ಅವರನ್ನು ರಿಯಾಝ್ ಪರಂಗಿಪೇಟೆ ಶಾಲು ಹೊದಿಸಿ ಸನ್ಮಾನಿಸಿದರು.