ಜೀ ಎಚ್ ಎಮ್ ಫೌಂಡೇಶನ್ ಮೂಲರಪಟ್ಣ ಹಾಗೂ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಯೋಗದೊಂದಿಗೆ ಶೈಖುನಾ ಮಿತ್ತಬೈಲ್ ಉಸ್ತಾದ್ ಹಾಗೂ ಶೈಖುನಾ ಹಸನ್ ಮುಸ್ಲಿಯಾರ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಹಾಗೂ ದುಶ್ಚಟ ಮುಕ್ತ ಸಮಾಜ ಮಾಹಿತಿ ಶಿಬಿರವು ಫೆಬ್ರವರಿ 06 ಆದಿತ್ಯವಾರದಂದು ದಾರುಲ್ ಉಲೂಮ್ ಮದ್ರಸ ಸಭಾಂಗಣ ಮೂಲರಪಟ್ಣ ಇಲ್ಲಿ ನಡೆಯಿತು.
ರಕ್ತದಾನ ಶಿಬಿರದಲ್ಲಿ ಹಲವಾರು ಯುವಕರು ಸ್ವಯಮ್ ಪ್ರೇರಿತರಾಗಿ ರಕ್ತದಾನ ಮಾಡಿ ಸುಮಾರು 77 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಕಾರ್ಯಕ್ರಮವನ್ನು ಸ್ಥಳೀಯ ಖತೀಬರಾದ ಅಬ್ದುಸ್ಸಲಾಮ್ ಯಮಾನಿ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ರಫೀಕ್ ಮಾಸ್ಟರ್ ದುಶ್ಚಟ ಮುಕ್ತ ಸಮಾಜ ಎಂಬ ಶೀರ್ಷಿಕೆಯಡಿ ಎಲ್ಲರಿಗೂ ಮನದಟ್ಟುವ ರೀತಿಯಲ್ಲಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಎಮ್ ಬಿ ಅಶ್ರಫ್ , ಜೀ ಎಚ್ ಎಮ್ ಫೌಂಡೇಶನ್ ಮೂಲರಪಟ್ಣ ಇದರ ಅಧ್ಯಕ್ಷರಾದ ಎಮ್ಎಸ್ ಶಾಲಿ,ಹಂಝ ಗುತ್ತು, ಎಮ್ ಬಿ ಇಸ್ಮಾಯಿಲ್ ಶಾಫಿ,ಝಕರಿಯಾ ಫರ್ವೀಜ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ
ಜೀ ಎಚ್ ಎಮ್ ಫೌಂಡೇಶನ್ ಮೂಲರಪಟ್ಣ ಇದರ ಸಕ್ರೀಯ ಸದಸ್ಯರಾದ ಸಜೀವುದ್ದೀವ್ ಎಮ್ ಎಸ್ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮೊಹಮ್ಮದ್ ಅನ್ಸಾರ್ ಧನ್ಯವಾದ ಸಮರ್ಪಿಸಿದರು.