ಬಂಟ್ವಾಳ: ಬಂಟ್ವಾಳ ಕಸ್ಬಾ ಗ್ರಾಮದ ಜೀರ್ಣೋದ್ಧಾರಗೊಳ್ಳುತ್ತಿರುವ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಜೀರ್ಣೋದ್ಧಾರದ ಕಾಮಗಾರಿಯನ್ನು ಪರಿಶೀಲಿಸಿದರು.
ಶ್ರೀ ಕ್ಷೇತ್ರಕ್ಕೆ ಸಂಬಂದಿಸಿದಂತೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೆಲವೊಂದು ಬೇಡಿಕೆಗಳನ್ನು ಜೀರ್ಣೋದ್ಧಾರ ಸಮಿತಿಯವರು ಬೇಡಿಕೆಯನ್ನು ಇಟ್ಟಿದ್ದು ಶಾಸಕರು ಈ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪುರಸಭಾ ಸದಸ್ಯೆ ಮೀನಾಕ್ಷಿ ಗೌಡ, ಚಂದ್ರಶೇಖರ ಪೂಜಾರಿ, ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಹರೀಶ್ ಕೋಟ್ಯಾನ್, ಅರ್ಚಕರಾದ ಅರುಣ್ ಕುಮಾರ್, ಸುಂದರ ಪೂಜಾರಿ ಅಗ್ರಾರ್, ದೀಕ್ಷಿತ್ ನೇರಂಬೋಳು, ಗಂಗಾಧರ ಸಾಮಾನಿ,ಮನೋರಂಜನ್ ಶೆಟ್ಟಿ, ಸುನೀಲ್ ಕುಮಾರ್ ದರ್ಬೆ, ಕೃಷ್ಣಪ್ಪ ಪೂಜಾರಿ, ಭಾಸ್ಕರ ಪೂಜಾರಿ, ಆನಂದ ಕೋಟ್ಯಾನ್ ಲಚ್ಚಿಲ್, ಪ್ರಭಾಕರ ಆಚಾರ್ಯ, ಸುಂದರ ಪೂಜಾರಿ ದರ್ಬೆ, ರವೀಶ್, ರವೀಂದ್ರ ಕುಲಾಲ್, ಹರೀಶ್ ಕುಲಾಲ್, ದಯಾನಂದ ಪೂಜಾರಿ, ಯೋಗೀಶ್ ಗೌಡ, ವಸಂತ ಭಂಡಾರಿ ಜಕ್ರಿಬೆಟ್ಟು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.