ಬೆಳ್ತಂಗಡಿ: ತುಳುನಾಡಿನಲ್ಲಿ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಸರ್ವ ಜಾತಿ ಜನಾಂಗದವರು ಆರಾಧಿಸಿಕೊಂಡು ಬರಿತ್ತಿರುವ ಕಾರ್ಣಿಕದ ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಹಾಗೂ ಬಿಲ್ಲವ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮೂಡಬಿದಿರೆಯ ರಾಜಕಾರಿಣಿ ಜಗದೀಶ್ ಅಧಿಕಾರಿಯ ಅತಿರೇಕದ ವರ್ತಣೆಯನ್ನು ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.
ಹಿರಿಯರ ಕಾಲು ಹಿಡಿದು ಆರ್ಶೀವಾದ ಪಡೆಯುವುದು ಭಾರತೀಯ ಸಂಸ್ಕ್ರತಿ. ಆದರೆ ಜಗದೀಶ್ ಅಧಿಕಾರಿ ತಮ್ಮ ಭಾಷಣದಲ್ಲಿ ಬಿಲ್ಲವ ಸಮಾಜದ ಮುಖಂಡ, ಹಿರಿಯ ರಾಜಕಾಣಿ ಜನಾರ್ದನ ಪೂಜಾರಿ ಬಗ್ಗೆ ಅವಹೇಳ ಮಾತುಗಳನ್ನಾಡಿದ್ದಾರೆ.ವೀರ ಪುರುಷರನ್ನು ಸರ್ವರು ಆರಾಧಿಸಿ ಗೌರವ ಅರ್ಪಿಸುತ್ತಿರುವಾಗ ಇತಿಹಾಸ ತಿಳಿಯದ ರಾಜಕಾರಣಿಯೊಬ್ಬ ಕೋಟಿ ಚೆನ್ನಯರ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿರುವುದು ಖಂಡನೀಯ. ವೀರ ಪುರುಷರಾದ ಕೋಟಿ ಚೆನ್ನಯರು, ಬಿಲ್ಲವ ಮುಖಂಡರು, ಹಿಂದೂ ಸಮಾಜದ ಬಗ್ಗೆ ಅಪಮಾನ ಮಾಡಿದ ಜಗದೀಶ್ ಅಧಿಕಾರಿ ಮೇಲೆ ಸರಕಾರ ಕಾನೂನು ಕ್ರಮ ಜರುಗಿಸಬೇಕೆಂದು ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ಅಧ್ಯಕ್ಷ ರಂಜಿತ್ ಹೆಚ್ .ಡಿ.ಬಳಂಜ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.