ಎಲ್ಲಾ ಸಾಧನೆಗಳ ಮೂಲ ಪ್ರೇರಣೆ ಯೋಗ. ಯೋಗವೆಂದರೆ ಕೇವಲ ದೈಹಿಕ ಕಸರತ್ತು ಮಾತ್ರ ಅಲ್ಲ ಬದಲಾಗಿ ಮನಸ್ಸಿನ, ಮೇಲಿನ ಹಿಡಿತ ಕೂಡಾ ಎಂದು ಖ್ಯಾತ ವಕೀಲರಾದ ಶ್ರೀ ಪ್ರಸಾದ ಕುಮಾರ್ ರೈ ಅಭಿಪ್ರಾಯಪಟ್ಟರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಹಾಗೂ ಮುಡಿಪು ಸಹ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ವಲಯ ಯೋಗ ಸ್ಫರ್ಧೆಯನು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವಿಶ್ಕಾರ್ ಯೋಗದ ಮುಖ್ಯಸ್ಥ ಕುಶಾಲಪ್ಪ ಗೌಡ ಮಾತನಾಡಿ ಯೋಗ ಎಂದು ವಿಶ್ವ ಮಾನ್ಯತೆ ಡಪೆದಿದ್ದು, ಎಲ್ಲಾ ವಯೋಮಾನದ, ವ್ಯಕ್ತಿಗಳ ಸರ್ವತೋಮುಖ ಬೆಳವಣಿಗೆಗೆ ಅನಿವಾರ್ಯವಾಗಿದೆ ಮಾತ್ರವಲ್ಲ ವಿಧ್ಯಾರ್ಥಿಗಳಿಗೆ ಯೋಗ ಒಂದು ಉದ್ಯೋಗ ಆಯ್ಕೆಯೂ ಆಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಸುಪಾಲರಾದ ಡಾ ಸತೀಶ್ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರುಣಾಕರ್ ಹಾಗೂ ಸಂದೀಫ್ ವಿಶೇಷ ತಜ್ಙರಾಗಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕಿಯರಾದ ಡಾ ಅಪರ್ಣ ಆಳ್ವ ಹಾಗೂ ಶುಭ ಕೆ. ಎಚ್ ಕಾರ್ಯಕ್ರಮ ಆಯೋಜಿಸಿದ್ದರು. ಮಮತಾ ಕಾರ್ಯಕ್ರಮ ನಿರೂಪಿಸದರು.