ಬಂಟ್ವಾಳ: ಕಾಂಗ್ರೇಸ್ ಮುಖಂಡ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಲ| ಚಂದ್ರಹಾಸ ಶೆಟ್ಟಿ ಬೋಳಂತೂರು ಅವರು ಇಂದು ಬೆಳಿಗ್ಗೆ 7 ಗಂಟೆಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದೀರ್ಘಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿಯೇ ಇದ್ದು ಇಂದು ಅವರು ಮೃತರಾಗಿದ್ದಾರೆ.ಇವರು ಸಾಮಾಜಿಕವಾಗಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಜೊತೆಗೆ ಧಾರ್ಮಿಕವಾಗಿ ಹೆಚ್ಚುಗುರುತಿಸಿ ಕೊಂಡಿದ್ದರು. ಬಿಸಿರೋಡಿನ ಪೋಲೀಸ್ ಲೇನ್ ನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯ ದ ನಿರ್ಮಾಣ ಹಾಗೂ ಬ್ರಹ್ಮ ಕಲಶದ ಉಸ್ತುವಾರಿ ವಹಿಸಿದ್ದ ಇವರು ಬೋಳಂತೂರು ಕೊಡಿಯಡ್ತಾಯಿ ದೇವಳದ ಅಧ್ಯಕ್ಷ ಇಂತಹ ಅನೇಕ ಧಾರ್ಮಿಕ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸು ಗೆದ್ದವರು. ವೀರಕಂಬ ಗ್ರಾ.ಪಂ.ಅಧ್ಯಕ್ಷರಾಗಿ ತಾಲೂಕು ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಅನೇಕ ಅಭಿವೃದ್ಧಿ ಕಾರ್ಯಗಳು ಇವರ ಅವಧಿಯಲ್ಲಿ ಅಗಿದೆ.
ಬೋಳಂತೂರು ಪ್ರೀತಿ ಬೀಡಿ ಮಾಲಕರಾಗಿ, ಪ್ರೀತಿ ಫಾರ್ಮ್ ಸೇರಿದಂತೆ ಅನೇಕ ಉದ್ಯಮಗಳಿಗೆ ಮಾಲಕರಾಗಿದ್ದವರು ಇವರು.
ವಿಟ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಾಗಿಯೂ ಪಕ್ಷವನ್ನು ಮುನ್ನಡೆಸಿದವರು. ಲಯನ್ಸ್ ಮಾಜಿ ಅಧ್ಯಕ್ಷರಾಗಿ ಬೋಳಂತೂರು ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷರಾಗಿದ್ದರು.
ಇವರ ನಿಧನಕ್ಕೆ ಮಾಜಿಸಚಿವ ಬಿ.ರಮಾನಾಥ ರೈ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೃತರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಅಭಿಮಾನಿ ಬಂಧುಮಿತ್ರರನ್ನು ಅಗಲಿದ್ದಾರೆ.