ಬಂಟ್ವಾಳ: ಇಲ್ಲಿನ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ತುಳಸೀವನ, ಬೋಳಂತೂರು 18 ನೇ ವಾರ್ಷಿಕೋತ್ಸವ ಇದೇ ಬರುವ ಫೆ.5 ರಂದು ನಡೆಯಲಿದೆ. ಇದರ ಪ್ರಯುಕ್ತ ಬೆಳಗ್ಗೆಯಿಂದ ಸಂಜೆ ತನಕ ಭಜನಾ ಕಾರ್ಯಕ್ರಮ ನಂತರ ಸಂಜೆ 6.15 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9.30 ಗಂಟೆಗೆ ಶ್ರೀ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ದೆಂತಡ್ಕ ಇವರಿಂದ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.