ಮಂಗಳೂರು: ಮೀನುಗಾರಿಕೆ ಸಚಿವರಾದ ಅಂಗಾರ ರವರು ಮೀನುಗಾರಿಕ ಬಂದರಿಗೆ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯಗಳ ಬಗ್ಗೆ ವೀಕ್ಷಿಸಿದರು. ನಂತರ ಮೀನುಗಾರಿಕ ಕಾಲೇಜಿನಲ್ಲಿ ನೂತನವಾಗಿ7.9ಕೋಟಿ ವೆಚ್ಚದಲ್ಲಿ ನಿರ್ಮಿಸಲ್ಲಿರುವ ಅಲ್ಟ್ರಾ ಮಾಡರ್ನ್ ಅಕ್ವ ಕಲ್ಚರ್ ಘಟಕಗಳ( ಮೀನು ಉತ್ಪಾದನ ಪಾಂಡ್ ಗಳ ) ಭೂಮಿ ಪೂಜೆ ನೇರವೇರಿಸಿದರು.
ಮಂಗಳೂರು ಬಂದರಿನಲ್ಲಿರುವ ಮತ್ಸ್ಯಗಂಧಿ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಎಫ್ಎಫ್ಪಿಒ (ಫಿಶ್ ಫಾರ್ಮರ್ಸ್ ಪ್ರೊಡ್ಯೂಸರ್ ಆರ್ಗನೈಸೇಷನ್) ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವರು ಮಾತನಾಡಿ ಕರಾವಳಿಯ ಬಂದರು ಸಮಸ್ಯೆ ನಿವಾರಣೆಗೆ ಶಾಶ್ವತವಾಗಿ ಯಾವೆಲ್ಲ ಕ್ರಮ ಕೈಗೊಳ್ಳಬೇಕು ವ್ಯವಸ್ಥಿತ ಬಂದರು ನಿರ್ಮಾಣದ ಬಗ್ಗೆ ಗಮನ ಹರಿಸುತ್ತೇನೆ.ಸೂಕ್ಷ್ಮವಾಗಿ ಅಧ್ಯಯನ ನಡೆಸಿ ಇಲಾಖೆಯ ಅಧಿಕಾರಿಗಳು ಮತ್ತು ಮೀನುಗಾರಿಕಾ ಸಂಘಟನೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ, ವ್ಯವಸ್ಥಿತ ಬಂದರು ನಿರ್ಮಾಣದ ಬಗ್ಗೆ ಗಮನ ಹರಿಸುತ್ತೇನೆ ಎಂಬ ಭರವಸೆಯನ್ನು ನೀಡುತ್ತೇನೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಬಂದರಿನ ಸಣ್ಣ – ಸಣ್ಣ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಿಸಲು ತುರ್ತಾಗಿ ಗಮನ ಹರಿಸಲಾಗುತ್ತದೆ. ಮಂಗಳೂರು ಬಂದರಿನಲ್ಲಿ 1,200 ಯಾಂತ್ರಿಕ ಹಾಗೂ 1,300 ನಾಡ ದೋಣಿಗಳು ಸೇರಿ ಒಟ್ಟು 2,500 ದೋಣಿಗಳಿವೆ. ಆದರೆ, ಇದೀಗ ಬಂದರಿನಲ್ಲಿ 1,500 – 2,000 ದೋಣಿಗಳಿಗೆ ಮಾತ್ರ ನಿಲುಗಡೆಗೆ ವ್ಯವಸ್ಥೆಗಳಿದ್ದು, ಉಳಿದ ದೋಣಿಗಳಿಗೆ ಲಂಗರು ಹಾಕಲು ಸರಿಯಾದ ವ್ಯವಸ್ಥೆಗಳಿಲ್ಲ. ಯಾವುದೇ ಸರ್ಕಾರಗಳಿರಲಿ, ಅದರೆ ನಾನು ಒಂದು ಯೋಜನೆಗೆ ಸೂಕ್ತ ರೀತಿಯ ಪರಿಹಾರ ನೀಡುವುದಿಲ್ಲ. ಆದರೆ, ನಮ್ಮಲ್ಲಿ ಭವಿಷ್ಯದ ದೂರದೃಷ್ಟಿತ್ವ ಇದ್ದಲ್ಲಿ ಸರ್ಕಾರದಿಂದ ದೊರಕುವ ಅನುದಾನ ಹಾಗೂ ಒಂದು ಯೋಜನೆಗೆ ಬೇಕಾಗಬಹುದಾದ ಪರಿಸ್ಥಿತಿ ಕೂಡಾ ಸುಧಾರಿಸಲು ಸಾಧ್ಯ.ಕೇಂದ್ರ ಮತ್ತು ರಾಜ್ಯಸರಕಾರದ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಯೋಜನೆಯನ್ನು ಕಾರ್ಯಗತಗೊಳಿಸಬೇಕಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯ, ಮೀನುಗಾರಿಕೆ ಸಲಕರಣೆಗಳ ಕಿಟ್ ಸವಲತ್ತುಗಳ ವಿತರಣೆ, ಎಫ್ಆರ್ ಪಿ ದೋಣಿ, ಬಲೆ ಮತ್ತು ಇಂಜಿನ್ ವಿತರಣೆ, ಮೀನುಗಾರಿಕೆ ಸುರಕ್ಷತಾ ಸಾಧನಗಳ ಖರೀದಿಗೆ ಸಹಾಯಧನ, ಸೀಗಡಿಕೊಳ ನಿರ್ಮಾಣಕ್ಕೆ ಸಹಾಯಧನ ಸೇರಿದಂತೆ ಮತ್ತಿತರ ಫಲಾನುಭವಿಗಳಿಗೆ ಸಚಿವರು ಸೌಲಭ್ಯ ವಿತರಣೆ ಮಾಡಿದರು.