ಬಂಟ್ವಾಳ: ಫೆ.27ಬಂಟ್ವಾಳ ತಾಲೂಕಿನ ಪಂಜಿಕಲ್ಲಿನಲ್ಲಿ ಪೋಲೀಸರಿಬ್ಬರು ಕರ್ತವ್ಯದ ಜೊತೆಗೆ ಒಂದು ಸಣ್ಣ ಅಳಿಲು ಸೇವೆ ಮಾಡಿದ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂಜಿಕಲ್ಲು ಗ್ರಾಮದ ಗರೋಡಿ ಎಂಬಲ್ಲಿ ಇರುವ ಜಿನ್ನು ಎಂಬ ಅಜ್ಜಿಗೆ ದಿನಬಳಕೆಯ ವಸ್ತುಗಳ ಜೊತೆಗೆ ಅಕ್ಕಿ ಯನ್ನು ನೀಡಿ ಮಾನವೀಯ ತೆ ಮೆರೆದ ಪೋಲೀಸರು ವ್ಯಾಪಕ ಪ್ರಶಂಸೆ ಗೆ ಪಾತ್ರರಾಗಿದ್ದಾರೆ.
ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಹೈ ವೇ ಪಟ್ರೋಲ್ ವಾಹನದಲ್ಲಿ ಕರ್ತವ್ಯ ನಿರತರಾಗಿದ್ದ ಪೋಲೀಸ್ ಕಾನ್ಸ್ ಟೇಬಲ್ ವಿಜಯ್ ಹಾಗೂ ಚಾಲಕ ವಿಶ್ವನಾಥ ಪೆರಾಜೆ ಅವರೇ ಬಡತನದಲ್ಲಿ ಜೀವನ ಮಾಡುವ ಕುಟುಂಬಕ್ಕೆ ನೆರವಾದವರು. ಊಟಕ್ಕೂ ಗತಿಯಿಲ್ಲ ಅಜ್ಜಿ ಜಿನ್ನು ಅವರ ಮನೆಯ ಸ್ಥಿತಿ ತೀರಾ ಕಷ್ಟಕರ ವಾಗಿದೆ.
ಜಿನ್ನು ಅವರಿಗೆ ಇಬ್ಬರು ಮಕ್ಕಳು ಒಂದು ಗಂಡು ಒಂದು ಹೆಣ್ಣು ಮಗಳು. ಇವರ ಪತಿ ಮತ್ತು ಮಗಅನಾರೋಗ್ಯದಿಂದ ನಿಧನ ರಾಗಿದ್ದಾರೆ. ಇರುವ ಹೆಣ್ಣು ಮಗಳ ಜೊತೆ ಅಜ್ಜಿ ಯ ಜೀವನ. ದುಡಿಯುವ ಶಕ್ತಿ ಯನ್ನು ಅಜ್ಜಿ ಕಳೆದುಕೊಂಡು ಬದುಕಿಗಾಗಿ ಹೋರಾಟ ಮಾಡಬೇಕು ಎಂಬ ಸ್ಥಿತಿ. ಇಂತಹ ಕುಟುಂಬದ ಬಗ್ಗೆ ತಿಳಿದುಕೊಂಡ ಪೋಲೀಸರಿಬ್ಬರ ಮನಸ್ಸು ಕರಗಿ ಇವರ ಊಟಕ್ಕೆ ಬೇಕಾದ ಅಲ್ಪಸ್ವಲ್ಪ ಸಹಾಯವನ್ನು ಮಾಡಿದ್ದಾರೆ.ಇವರು ಮಾಡಿದ ಸೇವೆ ಇದೀಗ ಸಾಮಾಜಿಕ ಜಾಲತಾಟದಲ್ಲಿ ವೈರಲ್ ಆಗಿದೆ.
ಕಡು ಬಡತನದ ಅಜ್ಜಿಯ ಮನೆಯ ಅಂಗಳಕ್ಕೆ ಹೋಗಿ ಸಾಮಾಗ್ರಿಗಳನ್ನು
ಕೊಡುವಾಗ ಅಜ್ಜಿಯ ಕಣ್ಣಿನಲ್ಲಿ ಆನಂದಬಾಷ್ಪ ಬಂದಾಗ ಕರಳು ಚುರ್ರ್ ಅಂತು ಎಂದು ಅವರು ಹೇಳುತ್ತಾರೆ.
ನಾವು ಹಾಕಿದ್ದು ಖಾಕಿ ಆಗಿರಬವುದು. ಆದ್ರೆ ಒಳಗೆ ಮಾನವೀಯತೆಯ ಗುಣ ಇದೆ ಎಂಬುದನ್ನು ಅವರು ಈ ಮೂಲಕ ಸಾಬೀತು ಪಡಿಸಿದರು.
ಲಾಕ್ ಡೌನ್ ಅವಧಿಯಲ್ಲಿ ಸಹಾಯ
ಕೊರೊನಾ ಅವಧಿಯಲ್ಲಿ ಊಟಕ್ಕಿಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಕುಟುಂಬದಲ್ಲಿ ಜಿನ್ನು ಕುಟುಂಬ ವೂ ಒಂದಾಗಿತ್ತು. ಈ ಸಮಯದಲ್ಲಿ ಈ ವ್ಯಾಪ್ತಿಯ ಬೀಟ್ ಪೋಲೀಸ್ ಬಸವರಾಜ್ ಅವರು ಗ್ರಾಮಾಂತರ ಎಸ್.ಐ.ಪ್ರಸನ್ನ ಅವರ ಸೂಚನೆಯಂತೆ ವೈಯಕ್ತಿಕ ನೆಲೆಯಲ್ಲಿ ಅಜ್ಜಿಯ ಕುಟುಂಬಕ್ಕೆ ದಿನಬಳಕೆಯ ವಸ್ತುಗಳ ನ್ನು ಪೂರೈಕೆ ಮಾಡಿದ್ದಾರೆ.