ವಿಟ್ಲ: ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ. ಸರಸ್ವತಿ ಹಾಗೂ ಉಪಾಧ್ಯಕ್ಷರಾಗಿ ಜಗದೀಶ್ ಶೆಟ್ಟಿ ಮುಳಿಯಗುತ್ತು ಆಯ್ಕೆಯಾದರು.
ಪಂಚಾಯಿತಿಯ 15 ಸ್ಥಾನದಲ್ಲಿ 10 ಕಾಂಗ್ರೆಸ್ ಹಾಗೂ 5 ಸ್ಥಾನದಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಚುನಾವಣಾಧಿಕಾರಿಯಾಗಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪಂಚಾಯಿತಿ ಪಿಡಿಒ ಜಿನ್ನಪ್ಪ ಗೌಡ ಪ್ರಕ್ರಿಯೆಗಳನ್ನು ನಡೆಸಿ ಕೊಟ್ಟರು.