ವಿಟ್ಲ: ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಒಬ್ಬ ಮೃತಪಟ್ಟು ಮತ್ತೊಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ ಪುತ್ತೂರು ರಸ್ತೆಯ ಕಂಬಳಬೆಟ್ಟು ಬದನಾಜೆ ಎಂಬಲ್ಲಿ ಸಂಭವಿಸಿದೆ.
ಬೆಳ್ತಂಗಡಿ ಮಡಂತ್ಯಾರು ನಿವಾಸಿ ಬೈಕ್ ಸವಾರ ಇಸ್ಮಾಯಿಲ್ ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.
ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಇಬ್ಬರು ಸವಾರರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಬೈಕ್ ಸವಾರ ಇಸ್ಮಾಯಿಲ್ ಮೃತಪಟ್ಟಿದ್ದು, ಸಹಸವಾರ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ನಲ್ಲಿದ್ದವರು ಬೆಳ್ತಂಗಡಿಯ ಮಡಂತ್ಯಾರು ಅಳಕೆ ನಿವಾಸಿಗಳೆಂದು ತಿಳಿದು ಬಂದಿದೆ.
ಬೈಕ್ ನ ದಾಖಲೆ ಪ್ರಕಾರ ಅಳಿಕೆ ಅಬ್ಬಾಸ್ ಅವರಿಗೆ ಸೇರಿದ ಬೈಕ್ ಎಂದು ತಿಳಿದು ಬಂದಿದೆ.