ಪುತ್ತೂರು: ಮಹೀಂದ್ರಾ ಪಿಕಪ್ ಹಾಗೂ ಟಿವಿಎಸ್ ಜುಪಿಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಮೊಟ್ಟೆತ್ತಡ್ಕ ಎಂಬಲ್ಲಿ ಸೋಮವಾರದಂದು ನಡೆದಿದೆ.
ಮೃತ ಸವಾರನನ್ನು ಸಾಮೆತ್ತಡ್ಕ ನಿವಾಸಿ ಸಿಂಧೂ ಸಾಫ್ಟ್ ಡ್ರಿಂಕ್ಸ್ ನ ಮಾಲಕ ಕರುಣಾಕರ್ ರವರ ಪುತ್ರ ಪ್ರಸಾದ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಜುಪಿಟರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪಿಕಪ್ ಚರಂಡಿಗೆ ಇಳಿದಿತ್ತು.
ಕರಾವಳಿಯಲ್ಲಿ ಕಳೆದ 36 ಗಂಟೆಗಳ ಅವಧಿಯಲ್ಲಿ ನಡೆದ 4 ದ್ವಿಚಕ್ರ ವಾಹನ ಅಪಘಾತದಲ್ಲಿ ನಾಲ್ವರು ಸವಾರರೂ ಬಲಿಯಾಗಿದ್ದು, ಬೆಚ್ಚಿಬೀಳಿಸುವಂತೆ ಮಾಡಿದೆ.
ಪುತ್ತೂರು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.