ಬಂಟ್ವಾಳ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ರಾತ್ರಿ ವೇಳೆ ನಡೆದಿದೆ.
ಕಲ್ಲಡ್ಕ ಸಮೀಪದ ಬಾಯಿಲ ನಿವಾಸಿ ಮಂಜುನಾಥ (25) ಮೃತಪಟ್ಟ ಯುವಕ.
ಮೆಲ್ಕಾರ್ ಸಾಮಿಯಾನ ಅಂಗಡಿಯೊಂದರಲ್ಲಿ ಯುವಕ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕಲ್ಲಡ್ಕದಿಂದ ಮನೆಯ ಕಡೆ ತನ್ನ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ವೇಳೆ ಕುದ್ರೆಬೆಟ್ಟು ಎಂಬಲ್ಲಿ ಪುತ್ತೂರು ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸವಾರ ಗಂಭೀರ ಸ್ವರೂಪದ ಗಾಯಗೊಂಡಿತ್ತು.
ಕೂಡಲೇ ಯುವಕನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ. ರಾಜೇಶ್ ಕೆ.ವಿ.ಬೇಟಿ ನೀಡಿದ್ದಾರೆ.
*ಎರಡು ಪ್ರಕರಣ ಎರಡು ಸಾವು*
ಕಲ್ಲಡ್ಕ ಆಸುಪಾಸಿನಲ್ಲಿ ಇಂದು ಬೆಳಿಗ್ಗೆ ರಾತ್ರಿ ಎರಡು ಅಪಘಾತ ಗಳು ನಡೆದಿದ್ದು ಎರಡು ಪ್ರಕರಣಗಳಲ್ಲಿ ಸ್ಕೂಟರ್ ಸವಾರರು ಮೃತಪಟ್ಟಿದ್ದಾರೆ.
ಬೆಳಿಗ್ಗೆ ಟ್ಯಾಂಕರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟರೆ ಸಂಜೆ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟಿದ್ದಾನೆ.