ಮಂಗಳೂರು: ರಾಜ್ಯ ಪೆಡರೇಷನ್ ಆಪ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ಸ್(ರಿ) ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಿದ್ದ “ಅಬಕಾರಿ ಉದ್ಯಮ ಉಳಿಸಿ “ ಅಭಿಯಾನವು ಇಂದು ದ.ಕ. ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ವತಿಯಿಂದ ಮಂಗಳೂರು ಕ್ಲಾಕ್ ಟವರ್ ಮುಂಬಾಗದ ಮಿನಿ ವಿದಾನ ಸೌಧ ಮುಂಬಾಗದಲ್ಲಿ ಜಿಲ್ಲೆಯ ಸನ್ನದುದಾರರ ಬಾಗವಹಿಸುವಿಕೆಯೊಂದಿಗೆ ನಡೆಯಿತು.



ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಿ ಎನ್ ಅಪ್ಪಚ್ಚು ಎಲ್ಲರನ್ನೂ ಸ್ವಾಗತಿಸಿ, ಅದ್ಯಕ್ಷರಾದ ಎಂ ಗಣೇಶ್ ಶೆಟ್ಟಿಯವರು ಸನ್ನದುದಾರರು ಅನುಭವಿಸುತ್ತಿರುವ ಭವಣೆಗಳ ಬಗ್ಗೆ ವಿವರಿಸಿ ನಮ್ಮ ಕಾನೂನಾತ್ಮಕ ಬೇಡಿಕೆಗಳ ಬಗ್ಗೆ ಗಮನ ಹರಿಸಿ ಪರಿಹರಿಸುವತ್ತ ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ವ್ಯಕ್ತ ಪಡಿಸಿದರು.
ಉಪಾದ್ಯಕ್ಷ ಲೂಯಿಸ್ ಜೋಕಿಮ್ ಪಿಂಟೋ ಮಾತನಾಡಿ ನಮ್ಮವರ ನೈಜ ಸ್ಥಿತಿ ವಿಭಿನ್ನವಾಗಿದ್ದರೂ ಮದ್ಯಮಾರಾಟಗಾರರು ಎಂದರೆ ಸಿರಿವಂತರು ಎಂದು ಬಾವಿಸದೇ ನಾವೂ ಕೂಡಾ ಘನತೆಯ ವ್ಯಾಪಾರಸ್ಥರು ಎಂದು ಪರಿಗಣಿಸಿ ನೀಡುತ್ತಿರುವ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಿ ರಾಜಸ್ವವನ್ನು ಹೆಚ್ಚಿಸುವಲ್ಲಿ ನಮ್ಮ ಸಲಹೆಗಳನ್ನೂ ಆಲಿಸಿ ಕಷ್ಟ ನಷ್ಟಗಳಿಂದ ನಮ್ಮ ಉದ್ಯಮವನ್ನು ಪಾರು ಮಾಡುವಂತೆ ಕೋರಿದರು.
ದ.ಕ. ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್‌ನ ಉಪಾದ್ಯಕ್ಷರುಗಳಾದ ನಾರಾಯಣ ಪಿ ಎಂ ಮೂಡಬಿದ್ರಿ, ವಿನೋದ್ ಪುತ್ತೂರು, ಜೊತೆ ಕಾರ್ಯದರ್ಶಿ ಓಂಪ್ರಸಾದ್ ಬಾರ್ದಿಲಾ ಬಂಟ್ವಾಳ, ಮಂಗಳೂರು ತಾಲೂಕು ಪದಾದಿಕಾರಿಗಳಾದ ದಿನೇಶ್ ಕೆ. ಅಂಚನ್, ಎಚ್. ನಾಗೇಶ್ ಶೆಟ್ಟಿ, ಅಜಿತ್ ಶೆಟ್ಟಿ, ಟಿ. ರಘುರಾಮ್ ಶೆಟ್ಟಿ, ಯು. ರಾಜೇಶ್, ಶಶಿಕುಮಾರ್ ಬೈಕಂಪಾಡಿ, ಸದಾನಂದ ಶೆಟ್ಟಿ ರಂಗೋಲಿ ಬಂಟ್ವಾಳ, ಸಂತೋಷ್ ನಾಯಕ್ ಪುತ್ತೂರು, ಸುಂದರ್ ರಾವ್ , ಗಣೇಶ್ ಆಳ್ವಾ ಸುಳ್ಯ, ಪ್ರಶಾಂತ್ ಬೆಳ್ತಂಗಡಿ, ಮತ್ತಿತರರು ಉಪಸ್ಥಿತರಿದ್ದರು.
ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆೆ ಸಲ್ಲಿಸಲಾಯಿತು.