ವಿಟ್ಲ: ವಿಟ್ಲ ಆರ್.ಕೆ. ಆಟ್ಸರ್್ ಚಿಣ್ಣರ ಮನೆ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿ ವಿಟ್ಲ ಪಂಚಲಿಂಗೇಶ್ವರ ಸದನ ಉದ್ಘಾಟನೆಗೊಂಡಿತು.
ಯಕ್ಷಗಾನ ಸಂಘಟಕ ದಿನಕರ್ ಭಟ್ ಮಾವೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ನಾಟ್ಯಗುರು ಸಬ್ಬಣ್ಣಕೋಡಿ ರಾಮಭಟ್, ಜಯರಾಮ್ ಬಲ್ಲಾಳ್ ವಿಟ್ಲ ಅರಮನೆ, ವಕೀಲ ಪ್ರಕಾಶ್ ನಾರಾಯಣ ಜೆಡ್ಡು, ರಮಾನಾಥ್ ವಿಟ್ಲ ಉಪಸ್ಥಿತರಿದ್ದರು.
ಆರ್.ಕೆ. ಆಟ್ಸರ್್ ಚಿಣ್ಣರ ಮನೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ಸ್ವಾಗತಿಸಿ, ಪ್ರಸ್ತಾವಿಸಿದರು. ಹೇಮಲತಾ ಮತ್ತು ರಮ್ಯಾ ಪಾರ್ಥನೆ ಮಾಡಿದರು. ಲತಾ ಲೋಕೇಶ್ ವಂದಿಸಿದರು. ಅರ್ಚನಾ ನಿರೂಪಿಸಿದರು.


