ಬಂಟ್ವಾಳ: ಸರಣಿ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ರಾಣಾ ವ್ಯಾಪ್ತಿಯ ವಗ್ಗ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ವಗ್ಗ ವಿರೇಂದ್ರ ಅಮೀನ್ ಮಾಲೀಕತ್ವದ ರಾಜೇಶ್ ಬಾರ್ ಗೆ ನುಗ್ಗಿದ ಕಳ್ಳರು ಕ್ಯಾಶ್
ಕೌಂಟರ್ ನಲ್ಲಿದ್ದ 7,500 ರೂ ನಗದು ಹಾಗೂ ಸಿ.ಸಿ.ಕ್ಯಾಮರಾ ದ ಡಿವಿಆರ್ ಹಾಗೂ ಇಂಟರ್ ನೆಟ್ ಪರಿಕರಗಳನ್ನು ಕಳ್ಳತನ ಮಾಡಿದ್ದಾರೆ. ಹಾಗೂ ಕೆಲವು ಸೊತ್ತುಗಳನ್ನು ಹಾಳುಗೆಡವಿದ್ದಾರೆ.
ಅದಲ್ಲದೇ ಅಲ್ಲೇ ಹತ್ತಿರದಲ್ಲಿ ಬಾರ್ ಗೆ ತಾಗಿಕೊಂಡ ಸುಮಾರು 7 ಅಂಗಡಿಗಳ ಬೀಗ ಮುರಿದು ಒಳನುಗ್ಗಿ ಜಾಲಾಡಿದ್ದಾರೆ. ವಗ್ಗ ಸಮೀಪದ ಮದ್ವ ಎಂಬಲ್ಲಿ ಗೋಪಾಲ ಎಂಬವರ ಫ್ಯಾನ್ಸಿ ಹಾಗೂ ದಿನಸಿ ಅಂಗಡಿಗಳಿಗೂ ನುಗ್ಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ಪೋಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.