ವಿಟ್ಲ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಉದ್ದೇಶಗಳಿಗಾಗಿ ಹೊಸ ವಾಹನಗಳನ್ನು ಖರೀದಿ ಮಾಡಿದ್ದು, ಇದಕ್ಕೆ ಅಗತ್ಯವಿರುವ ಚಾಲಕರು ಹಾಗೂ ಕಾರ್ಮಿಕರನ್ನು ಸ್ಥಳೀಯವಾಗಿ ಪಟ್ಟಣ ಪಂಚಾಯಿತಿಗೆ ತೆರಿಗೆ ಪಾವತಿ ಮಾಡುವ ನುರಿತ ಚಾಲಕರನ್ನೇ ನೇಮಕ ಮಾಡಬೇಕು ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಆಗ್ರಹಿಸಿದ್ದಾರೆ.
ಸ್ಥಳೀಯ ವ್ಯಾಪ್ತಿಯಲ್ಲಿ ಉದ್ಯೋಗವಿಲ್ಲದೇ ಚಾಲಕ ವೃತ್ತಿ ನಡೆಸುವ ವ್ಯಕ್ತಿಗಳು ಸಾಕಷ್ಟು ಜನರು ಇರುವಾಗ ಹೊರಗಿನಿಂದ ಪ್ರತ್ಯೇಕ ಜನರನ್ನು ಕರೆಸಿಕೊಳ್ಳುವ ಕಾರ್ಯವಾಗಬಾರದು. ಕಾನೂನು ಪ್ರಕಾರ ಟೆಂಡರ್ ನಡೆಸಿ ನೇಮಕಾತಿ ನಡೆಯಬೇಕಾದರೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಳಗಿನವರಿಗೆ ಆದ್ಯತೆ ಎಂಬ ವಿಚಾರವನ್ನು ಸೇರಿಸಿಕೊಳ್ಳಬೇಕು. ಆರು – ಏಳು ಮಂದಿಗೆ ಉದ್ಯೋಗ ಸಿಗುವ ಸಂದರ್ಭದಲ್ಲಿ ಸ್ಥಳೀಯರಿಗೆ ಇದರ ಲಾಭ ಸಿಗಬೇಕೆಂದು ಅವರು ಒತ್ತಾಯಿಸಿದ್ದಾರೆ.