ಬಂಟ್ವಾಳ: ಮೂಲತಃ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ತಿಂಗಳಾಡಿ ನಿವಾಸಿ ಚಂದ್ರಶೇಖರ ಅವರು ತನ್ನ ಪತ್ನಿ ಉಷಾ ಮತ್ತು ಇಬ್ಬರು ಮಕ್ಕಳ ಜೊತೆ ಕಾರ್ಕಳ ತಾಲೂಕಿನ ಇನ್ನ ಸುವರ್ಣಪಡ್ಪು ಗೋಳಿದಡಿಯಲ್ಲಿ ವಾಸಿಸುತ್ತಿರುವರು. ಇಬ್ಬರು ಮಕ್ಕಳಲ್ಲಿ ಕಿರಿಯವರಾದ ಯತೀಶ್ ಅವರಿಗೆ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಉಡುಪಿಯ ಆಸ್ಪತ್ರೆಯಲ್ಲಿ ದಾಖಲಾಗಿ ಇದೀಗ ಚೇತರಿಸಿಕೊಳ್ಳುತ್ತಿದ್ದರೆ. ಇವರ ಮುಂದಿನ ಚಿಕಿತ್ಸೆಗೆ ರೂ.30,000 ಧನ ಸಹಾಯವನ್ನು ಶ್ರೀ ಕ್ಷೇತ್ರ ಕಾರಿಂಜದಲ್ಲಿ ಅರ್ಚಕರಾದ ಮೋಹನ್ ಭಟ್ ಇವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಈ ಸಮಯದಲ್ಲಿ ಟ್ರಸ್ಟ್ ನ ಸೇವಾ ಮಣಿಕ್ಯರು ಉಪಸ್ಥಿತರಿದ್ದರು.