Wednesday, October 18, 2023

“ಬಲೆ ತುಲು ಲಿಪಿ ಕಲ್ಪುಗ” ಉಚಿತ ತುಲು ಲಿಪಿ ಕಲಿಕಾ ಕಾರ್ಯಗಾರ

Must read

ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.), ಯುವಜನ ವ್ಯಾಯಾಮ ಶಾಲೆ ಭಂಡಾರಿಬೆಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಯುವಜನ ವ್ಯಾಯಾಮ ಶಾಲೆ ಭಂಡಾರಿಬೆಟ್ಟು ಸಭಾಭವನದಲ್ಲಿ  “ಬಲೆ ತುಲು ಲಿಪಿ ಕಲ್ಪುಗ” ಉಚಿತ ತುಲು ಲಿಪಿ ಕಲಿಕಾ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮವನ್ನು ಬಂಟ್ವಾಳ ಪುರಸಭೆಯ ಸದಸ್ಯರಾದ ಹರಿಪ್ರಸಾದ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಾತನಾಡಿ “ತುಲು ಲಿಪಿಯನ್ನು ತುಲುನಾಡಿನಾದ್ಯಂತ ಮತ್ತೊಮ್ಮೆ ಬಳಕೆಗೆ ತರಲು ಇಂತಹ ಕಾರ್ಯಕ್ರಮಗಳು ಪ್ರತಿ ಊರಿನಲ್ಲಿ ನಡೆಯಬೇಕು, ಈ ನಿಟ್ಟಿನಲ್ಲಿ ಎಲ್ಲಾ ಕಡೆ ಜನಜಾಗೃತಿ ಆಗಬೇಕು” ಎಂದರು. ತುಲು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳರವರು ತುಲು ಲಿಪಿಯಲ್ಲಿ ಓಂ ಬರೆಯುವ ಕಾರ್ಯಗಾರಕ್ಕೆ ಚಾಲನೆ ನೀಡಿದರು. ನಂತರ ಜೈ ತುಲುನಾಡ್ (ರಿ.) ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ನಡೆದ ಆನ್‌ಲೈನ್ ತುಲು ಲಿಪಿ ತರಗತಿಯಲ್ಲಿ ಕಲಿತು ಪರೀಕ್ಷೆ ಬರೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುವಜನ ವ್ಯಾಯಾಮ ಶಾಲೆ ಭಂಡಾರಿಬೆಟ್ಟು ಇದರ ಕಾರ್ಯದರ್ಶಿ ಜಗದೀಶ್ ಬಿ, ತುಲು ಲಿಪಿ ಶಿಕ್ಷಕರಾದ ಪೂರ್ಣಿಮಾ ಬಂಟ್ವಾಳ ಮತ್ತು ಭವಿತಾ ಗೌಡ ಉಪಸ್ಥಿತರಿದ್ದರು. ಇಂದು ಶುರುವಾದ ತುಲು ಲಿಪಿ ತರಗತಿಯು ಮುಂದಿನ 4 ಆದಿತ್ಯವಾರ ನಡೆದು, ನಂತರ ಪರೀಕ್ಷೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು. ತುಲು ಲಿಪಿ ಶಿಕ್ಷಕರಾದ ಪೂರ್ಣಿಮಾ ಬಂಟ್ವಾಳರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಜಗದೀಶ ಗೌಡ ಕಲ್ಕಳರವರು ಧನ್ಯವಾದಗೈದರು.

More articles

Latest article