ಬಂಟ್ವಾಳ: ಜಿಲ್ಲೆಯ ಲ್ಲಿ ಹಕ್ಕಿ ಜ್ವರದ ಯಾವುದೇ ಬಾಧೆಯಿಲ್ಲ, ಕೇಂದ್ರ ಸರಕಾರದ ಅದೇಶದಂತೆ ಗಡಿ ಪ್ರದೇಶದಲ್ಲಿ ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದೆ.ಜಿಲ್ಲೆಯ ಗಡಿ ಪ್ರದೇಶ ಗಳಾದ ಸಾರಡ್ಕ ಮತ್ತು ಉಕ್ಕುಡ ದಲ್ಲಿ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.ಕೇರಳ ರಾಜ್ಯದಿಂದ ಬರುವ ಕೋಳಿ ಅಥವಾ ಮೊಟ್ಟೆಗಳಿಗೆ
ನಿರ್ಬಂಧ ಹೇರಳಾಗಿದೆ.ಜಿಲ್ಲೆಯಿಂದ ಹೋಗುವ ಕೋಳಿ ವಾಹನಗಳಿಗೆ ಕ್ರಿಮಿನಾಶಕ ಗಳು ಸಿಂಪಡಣೆ ವ್ಯವಸ್ಥೆ ಕಲ್ಪಿಸಿ ಸಲಾಗಿದೆ.ಪ್ರಸ್ತುತ ರ್ಯಾಂಡಮ್ ಸ್ಯಾಂಪಲ್ ನಲ್ಲಿ ಹಕ್ಕಿ ಜ್ವರದ ಯಾವುದೇ ಲಕ್ಷಗಳು ಬಂದಿಲ್ಲ ಎಂದು ಸ್ಪಷ್ಟ ಪಡಿಸಿದರು.ಕೇರಳದಲ್ಲಿ ಬಾತು ಕೋಳಿಗೆ ಜ್ವರ ಬಂದಿರುವುದು ಎಂದು ಪಶುಸಂಗೋಪನೆ ಇಲಾಖಾ ಅಧಿಕಾರಿ ತಿಳಿಸಿದರು.
ಅವರು ಗುರುವಾರ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ಎಸ್.ಜಿ.ಎಸ್.ವೈ.ಸಭಾಂಗಣದ ಲ್ಲಿ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ
ಮಾಹಿತಿ ನೀಡಿದರು.
ಮೆಸ್ಕಾಂ ಇಲಾಖೆ ಮೀಟರ್ ರೀಡಿಂಗ್ ಮಾಡದೆ ಅಂದಾಜಿಗೆ ವಿದ್ಯುತ್ ಬಿಲ್ ನೀಡುತ್ತಿರುವುದರಿಂದ ಅಧಿಕ ಮೊತ್ತದ ಬಿಲ್ ಗಳು ಗ್ರಾಹಕರ ಕೈಸೇರುತ್ತಿದೆ. ಇದರಿಂದ ಗ್ರಾಹಕರು ಅತಂತ್ರರಾಗಿದ್ದಾರೆ.
200 ರೂ ಬಿಲ್ ಬರುತ್ತಿದ್ದ ಗ್ರಾಹಕರಿಗೆ 11000 ಬಿಲ್ ಬರುವುದು ಇದೇನಿದು ನ್ಯಾಯನಾ? ಎಂದು ತಾ.ಪಂ.ಸದಸ್ಯ ಉಸ್ಮಾನ್ ಕರೋಪಾಡಿ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ಇಂತಹ ಸಮಸ್ಯೆ ಅನೇಕ ತಿಂಗಳಿನಿಂದ ಅಗುತ್ತಿದ್ದು ,ವಿದ್ಯುತ್ ಇಲಾಖೆಯಲ್ಲಿ ಅನೇಕ ಅವ್ಯಸ್ಥೆಗಳು ಇದ್ದು ಕೂಡಲೇ ಸರಿಪಡಿಸಬೇಕು ಎಂದು ತಾ.ಪಂ.ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರು.
ಹಳೆಯ ತಂತಿಗಳನ್ನು ಹಾಗೂ ನೇತಾಡುತ್ತಿರುವ ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡುವಂತೆ ಸದಸ್ಯರು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು.
ಸರಕಾರಿ ಬಸ್ ಗಳು ರೂಟ್ ಗಳಿಗೆ ಇನ್ನೂ ಕೂಡ ಸಂಚಾರ ಆರಂಭ ಮಾಡಿಲ್ಲ ಎಂಬ ಸದಸ್ಯರ ಆರೋಪಕ್ಕೆ ಉತ್ತರಿಸಿದ ಕೆ.ಎಸ್.ಆರ್.ಟಿ.ಸಿ.ಇಲಾಖಾಧಿಕಾರಿ,
ಕೋವಿಡ್ ಬಳಿಕ ಹಂತಹಂತವಾಗಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮುಂದಿನ 15 ತಾರೀಖು ಮೇಲೆ ಎಲ್ಲಾ ರೂಟ್ ಗಳಿಗೆ ಬಸ್ ಆರಂಭವಾಗುತ್ತದೆ
ಎಂದು ಸಭೆಗೆ ತಿಳಿಸಿದರು.
ಕೃಷಿ ಇಲಾಖೆಯ ವತಿಯಿಂದ ನೀಡುವ ಕೃಷಿ ಸಲಕರಣೆಗಳು ಅಥವ ಅನುದಾನಗಳು , ಯೋಜನೆಗಳು ರೈತರು ಅರ್ಜಿ ನೀಡಿದ ಅವಧಿಯಲ್ಲಿ ಯೇ ಫಲಾನುಭವಿ ರೈತರಿಗೆ ಇಲಾಖೆ ನೀಡಬೇಕು ಎಂದು ತಾ.ಪಂ. ಸದಸ್ಯ ಉಸ್ಮಾನ್ ಕರೋಪಾಡಿ ಅವರು ಹೇಳಿದರು.
ಗ್ರಾ.ಪಂ.ಚುನಾವಣೆ ನಿಂತು ಸದಸ್ಯರಾಗಿ ಆಯ್ಕೆಯಾದ ಅಡುಗೆ ಸಹಾಯಕರನ್ನು ಕೆಲಸದಿಂದ ಬಿಡುಗಡೆ ಮಾಡುವಂತೆ ಸರ್ಕ್ಯೂಲರ್ ಬಂದಿದ್ದು ಅಂತವಹರ ಪಟ್ಟಿ ಮಾಡುವಂತೆ ಇ.ಒ.ಸಭೆಯಲ್ಲಿ ತಿಳಿಸಿದರು.
ಚುನಾವಣೆ ಗೆ ಸ್ಪರ್ಧೆ ಮಾಡುವ ಸಂದರ್ಭದಲ್ಲಿ ಚುನಾವಣಾ ಆಯೋಗ ಅದೇಶ ಮಾಡಿಲ್ಲ ಎಂದು ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಸಭೆಗೆ ತಿಳಿಸಿದರು.
ಈ ಬಗ್ಗೆ ಪ್ರಸ್ತುತ ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಬೇಡ , ಸರಕಾರದ ಸ್ಪಷ್ಟೀಕರಣ ಪಡೆಯುವ.ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಈಗ ತೊಂದರೆ ಯಾಗಿದೆ ಎಂದು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಹೇಳಿದರು.
ಚುನಾವಣಾ ಕೇಂದ್ರ ಕ್ಕೆ ಬರುವ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ , ಮತ ಎಣಿಕೆ ಕೇಂದ್ರದಲ್ಲಿಯೂ ಅವ್ಯವಸ್ಥೆ ಉಂಟಾಗಿದೆ, ಈ ರೀತಿಯ ಅವ್ಯವಸ್ಥೆ ಮುಂದಿನ ಚುನಾವಣಾ ಸಂದರ್ಭದಲ್ಲಿ ಆಗಬಾರದು ಅದಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳಲು ಸಭೆಯಲ್ಲಿ ಅಧ್ಯಕ್ಷರ ಗಮನಕ್ಕೆ ತಂದರು.
ಚುನಾವಣೆಯ ಬಗ್ಗೆ ಸರಿಯಾದ ಮಾಹಿತಿ ನೀಡುವ ಕಾರ್ಯಕ್ರಮ ಗಳು ತಾಲ್ಲೂಕು ಆಡಳಿತ ದಿಂದ ಅಥವಾ ಚುನಾವಣಾ ಶಾಖೆಯಿಂದ ಆಗಬೇಕು ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧಿಕಾರಿಗಳಿಗೆ ತಿಳಿಸಿದರು.
ಈ ಚುನಾವಣೆಯಲ್ಲಿ ಅಗಿರುವ ಗೊಂದಲ ಹಾಗೂ ಸಮಸ್ಯೆಯ ಬಗ್ಗೆ ಸರಕಾರಕ್ಕೆ ಪತ್ರ ಬರೆದು ಮುಂದಿನ ಚುನಾವಣೆ ಯಲ್ಲಿ ಯಾವುದೇ ಸಮಸ್ಯೆ ಗಳಾಗದಂತೆ ಜವಾಬ್ದಾರಿ ಯಿಂದ ಕೆಲಸ ಮಾಡುವಂತೆ ಆಗಬೇಕಾಗಿದೆ.
ತಾ.ಪಂ.ನ ಅನುದಾನದಲ್ಲಿ ಈಗಾಗಲೇ ಅನೇಕ ಕಾಮಗಾರಿಗಳು ಆರಂಭವಾಗಿದ್ದು, ಇದರ ಮೇಲುಸ್ತುವಾರಿ ನೋಡಿಕೊಂಡು ಕಳಪೆಯಾಗದಂತೆ ಸಮಯದಲ್ಲಿ ಆಗುವುಂತೆ ಸದಸ್ಯರು ನೋಡಿಕೊಳ್ಳಲು ಇ.ಒ.ರಾಜಣ್ಣ ತಿಳಿಸಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಉಪಸ್ಥಿತರಿದ್ದ