ಪ್ರಜಾತಂತ್ರ ಗಣರಾಜ್ಯ ದೇಶವಾದ ಭಾರತದಲ್ಲಿ ಜಾತಿ ಮತ ಪಂಥ ಬೇಧವಿರದೆಎಲ್ಲರೂ ಸಮಾನರು. ಸಮಾಜವಾದಿ ರಾಷ್ಟ್ರವಾದ ಇಲ್ಲಿ ಎಲ್ಲರಿಗೂ ಹಕ್ಕುಗಳಿವೆ. ಅವುಗಳನ್ನು ಸದ್ವಿನಿಯೋಗಿಸುತ್ತಾ ಬಾಳಿದರೆ ಅಂಥವರಿಗೆ ಒಳಿತಾಗುತ್ತದೆ.
ಗಣರಾಜ್ಯ ನೀತಿಸಂಹಿತೆ ಸಂವಿಧಾನವನ್ನು ಗೌರವಿಸುತ್ತ, ನಮ್ಮಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಾದುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ನಮ್ಮ ಮನೆಯಿಂದಲೇ ಒಳ್ಳೆಯ ಶಾಂತಿಯುತ ಬದುಕನ್ನು ಬದುಕುವುದರ ಮೂಲಕ ದೇಶವನ್ನು, ದೇಶದ ಪ್ರಜಾಪ್ರಭುತ್ವದ ಸಮಾನತೆಯ ಆದರ್ಶವನ್ನು ಉಳಿಸೋಣ ಎಂಬುದಾಗಿ ಯಕ್ಷಗಾನ ಕಲಾವಿದ ಹಾಗು ಉಪನ್ಯಾಸಕರಾದ  ದಿನೇಶ ಶೆಟ್ಟಿ ಅಳಿಕೆ ಅವರು ಹೇಳಿದರು.
ಅವರು ತುಂಬೆ ಪ.ಪೂ.ಕಾಲೇಜಿನಲ್ಲಿ ಏರ್ಪಡಿಸಿದ್ದ 72ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ, ಧ್ವಜಾರೋಹಣ ನೆರವೇರಿಸಿದ ತುಂಬೆ ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವರವರು ಮಾತನಾಡುತ್ತಾ ಪ್ರಜಾತಂತ್ರ ರಾಜ್ಯದಲ್ಲಿ ಪ್ರಜೆಗಳೇ ನಾಯಕರಾಗಿರುತ್ತಾರೆ. ನಾವು ಆರಿಸಿ ಕಳುಹಿಸಿರುವ ಪ್ರತಿನಿಧಿಗಳೇ ಸೇವಕರಾಗಿರುತ್ತಾರೆ. ಆದುದರಿಂದ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯಲ್ಲಿ ಉತ್ತಮ ನಾಯಕರನ್ನು ಪ್ರತಿನಿಧಿಗಳಾಗಿ ಆರಿಸುವಗುಣ ನಾಗರಿಕರಲ್ಲಿ ಬೆಳೆಯಲಿ ಎಂಬುದಾಗಿ ಹೇಳಿದರು.
ತುಂಬೆ ಪ್ರೌಢಶಾಲಾ ಮುಖ್ಯ ಗುರುಗಳಾದ  ಶ್ರೀನಿವಾಸ ಕೆದಿಲ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕ  ವಿ. ಸುಬ್ರಹ್ಮಣ್ಯ ಭಟ್‌ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ  ಜಗದೀಶರೈ ಬಿ. ಮತ್ತು  ಸಾಯಿರಾಂ ನಾಯಕ್ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here